Home ಅಪರಾಧ ಲೋಕ ಮಂಗಳೂರು; ತಲವಾರಿನಿಂದ ಕಡಿದು ಯುವಕನ ಭೀಕರ ಕೊಲೆ

ಮಂಗಳೂರು; ತಲವಾರಿನಿಂದ ಕಡಿದು ಯುವಕನ ಭೀಕರ ಕೊಲೆ

0
13

ಮಂಗಳೂರು: ಸುರತ್ಕಲ್ ನ ಮಹಮ್ಮದ್ಫಾಝಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಸಾರ್ವಜನಿಕರ ಎದುರೇ ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಬಜ್ಜೆಯ ಕಿನ್ನಿಪದವು ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಡೆದಿದೆ.
ಲಭ್ಯ ಮಾಹಿತಿಗಳ ಪ್ರಕಾರ ಕಿನ್ನಿಪದವು ಪೇಟೆಯಲ್ಲಿ ಮೀನಿನ ಪಿಕಪ್ ಮತ್ತು ಸುಹಾಸ್‌ ಶೆಟ್ಟಿಯ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರು ಸಮೀಪದ ಅಂಗಡಿಗೆ ನುಗ್ಗಿತ್ತು. ಬಳಿಕ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ ಇದಾದ ಬಳಿಕ ಹೊಡೆದಾಟ ನಡೆದಿರುವುದಾಗಿ ಹೇಳಲಾಗಿದೆ.

ಇದೇವೇಳೆ ನಾಲ್ವರು ದುಷ್ಕರ್ಮಿಗಳು ಸುಭಾಷ್‌ ಶೆಟ್ಟಿಯನ್ನು ತಲವಾರಿನಿಂದ ಕೊಚ್ಚಿ ಖಲೆ ಮಾಡಿದ್ದಾರೆ. ಆತ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here