


ಬೆಳ್ತಂಗಡಿ; ಈಸ್ಟರ್ ಹಬ್ಬವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಸಾಂಬ್ರಮದಿಂದ ಧಾರ್ಮಿಕ ವಿಧಿವಿಧಾಮಗಳೊಂದಿಗೆ ಆಚರಿಸಲಾಯಿತ್ತು. ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಸಂಜೆ ಬಲಿಪೂಜೆಯೊಂದಿಗೆ, ಈಸ್ಟರ್ ದಿನದ ವಿಧಿವಿದಾನಗೆಳು ಆರಂಭಗೊಂಡಿತ್ತು. ಯೇಸು ಸ್ವಾಮಿಯು ಯಾತನೆಯನ್ನು ಅನುಭವಿಸಿ ಮರಣಹೊಂದಿ, ಪುನರುತ್ಧಾನಗೊಂಡ ದಿನದ ಅನುಸ್ಮರಣೆಯೆ ಈಸ್ಟರ್ ಹಬ್ಬದ ಕಾರ್ಯಕ್ರಮಗಳಲ್ಲಿ ಚರ್ಚ್ ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಗಳಾದರು.


ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ವ. ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು ಈಸ್ಟರ್ ಹಬದ್ಬ ವಿಧಿವಿದಾನಗೆಳನ್ನು ನೆರವೆರಿಸಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು. ನಂತರ ಯೆಸುಸ್ವಾಮಿಯು ಪುನರುತ್ಧಾನವನ್ನು ಸ್ಮರಿಸುವ ಮೆರಣಿಗೆಯಲ್ಲಿ ಧರ್ಮಗುರುಗಳು, ಧರ್ಮ ಭಗಿನಿಯರು, ಭಕ್ತಾದಿಗಳು ಭಕ್ತಿಪೂರ್ವಕವಾಗಿ ಪಾಲ್ಗಂಡರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚನ್ಸ್ ಲರ್ ಫಾ. ಲಾರೆನ್ಸ್ ಪುಣೋಳಿಲ್
ಈಸ್ಟರ್ ದಿನದ ಪ್ರವಚನವನ್ನು ನೀಡಿದರು ವ. ಫಾ. ತೋಮಸ್ ಕಣ್ಣಾಂಙಳ್, ವ. ಫಾ. ಕುರಿಯಾಕೋಸ್ ವೆಟ್ಟುವಯಿ ಉಪಸ್ಧಿತರಿದ್ದರು.










