Home ಅಪರಾಧ ಲೋಕ ಸಮಾಜ ಸೇವಕರ ಸೋಗಿನಲ್ಲಿ ವ್ಯಕ್ತಿಯನ್ನು  ಹನಿ ಟ್ರಾಪ್ ಗೆ ಸಿಲುಕಿಸುವ ಯತ್ನ; ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ...

ಸಮಾಜ ಸೇವಕರ ಸೋಗಿನಲ್ಲಿ ವ್ಯಕ್ತಿಯನ್ನು  ಹನಿ ಟ್ರಾಪ್ ಗೆ ಸಿಲುಕಿಸುವ ಯತ್ನ; ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

10
0

ಬೆಳ್ತಂಗಡಿ : ಬಡ ಹೆಣ್ಮಗಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಥಾಂಧವ ಮತ್ತು ಇನ್ನಿಬ್ಬರು ಸೇರಿಕೊಂಡು ಹನಿಟ್ರ್ಯಾಪ್ ಮಾಡಿದ್ದು, ಇದರಿಂದ ನೊಂದ ವ್ಯಕ್ತಿ ಪೂಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಟ‌ರ್ ಸಿದ್ಧಿಕ್ ಸಂತ್ರಸ್ತ ವ್ಯಕ್ತಿಯಾಗಿದ್ದು, ಆಸಿಫ್ ಆಪ‌ತ್ಬಾಂಧವ ಹಾಗು ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ.

ಮಂಗಳೂರಿನ ಬಡ ಯುವತಿಯೊಬ್ಬಳ ಮದುವೆ ಉದ್ದೇಶಕ್ಕಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಟ‌ರ್ ಸಿದ್ದಿಕ್ ಹಣ ಸಂಗ್ರಹ ಮಾಡುತ್ತಿದ್ದರು. ಆದರೆ ಹಣ ಹೆಚ್ಚು ಸಂಗ್ರಹವಾಗದೇ ಇದ್ದ ಸಂದರ್ಭದಲ್ಲಿ ಮದುವೆಯಾಗುವ ಯುವತಿಯ ಸೋದರಿ ಎಂಬ ಹೆಸರಲ್ಲಿ ಎಪ್ರಿಲ್ 8ರಂದು ರಾತ್ರಿ ವಾಟ್ಸಾಪ್ ಕರೆ ಮಾಡಿದ್ದ ಮಿನಾಜ್ ಎಂಬ ಮತ್ತೊಬ್ಬ ಮಹಿಳೆ, ನೀವು ಇಷ್ಟು ಹಣ ಸಂಗ್ರಹ ಮಾಡಿದರೆ ಸಾಲದು. ದೊಡ್ಡ ಮೊತ್ತದ ಹಣ ಸಂಗ್ರಹ ಮಾಡಬೇಕು. ಇದಕ್ಕೆ ಬೇಕಾದರೆ ನಿಮ್ಮ ಜೊತೆಗೆ ಎಲ್ಲದಕ್ಕೂ ಸಹಕರಿಸುತ್ತೇನೆ. ಅಗತ್ಯ ಬಿದ್ದರೆ ಲೈಂಗಿಕ ಸುಖ ನೀಡುವುದಕ್ಕೂ ರೆಡಿ ಇದ್ದೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದಳು. ಅಲ್ಲದೆ, ವಾಟ್ಸಪ್ ಚಾಟಿಂಗ್ ಮತ್ತು ವಿಡಿಯೋ ಕರೆಯನ್ನೂ ಮಾಡಿದ್ದಳು.

ಮರುದಿನ ಆಸಿಫ್ ಆಪತ್ಪಾಂಧವ ಮತ್ತು ರವೂಫ್ ಬೆಂಗರೆ ಮಿನಾಜ್ ಎಂಬ ಮಹಿಳೆಯ ಜೊತೆಗಿನ ಚಾಟಿಂಗ್ ಮತ್ತು ವಿಡಿಯೋ ಕರೆಯ ಸ್ಟೀನ್ ಶಾಟ್ ಮುಂದಿಟ್ಟು ಅಕ್ಟರ್ ಸಿದ್ದಿಕ್ ಗೆ ಕರೆ ಮಾಡಿದ್ದು, ಮೂರು ಲಕ್ಷ ನಗದು ಮತ್ತು ಮೂರು ಪವನ್ ಚಿನ್ನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಎಪ್ರಿಲ್ 10ರ ಒಳಗಡೆ ಹಣ ಸಂದಾಯ ಮಾಡದಿದ್ದರೆ ಚಾಟಿಂಗ್ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬ್ಲಾಕೇಲ್ ಮಾಡಿದ್ದಾರೆ. ಇದರಿಂದ ಭೀತಿಗೊಳಗಾದ ಅಕ್ಟರ್ ಸಿದ್ದಿಕ್ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ಈ ಬಗ್ಗೆ ದೂರು ಕೊಟ್ಟಿದ್ದು, ಎಫ್‌ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here