


ಬೆಳ್ತಂಗಡಿ,ಎಪ್ರಿಲ್ 17: ತಾಲ್ಲೂಕಿನ ವೇಣೂರು ಸಮೀಪದ ಪೆರಾಡಿ ಎಂಬಲ್ಲಿ ಕುಡುಕರ ಗುಂಪೊಂದು ಪುರುಷಕಟ್ಟುನ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಹಾಗೂ ಪ್ರವಾದಿ(ಸ.ಅ) ರವರನ್ನು ವ್ಯಂಗ್ಯವಾಗಿ ಹಾಗೂ ಆಶ್ಲೀಲವಾಗಿ ಚಿತ್ರೀಕರಿಸಿ ಕೋಮುದ್ವೇಷ ಹಬ್ಬಲು ಪ್ರಯತ್ನ ಪಡುತ್ತಿರುವ ಕೃತ್ಯವನ್ನು ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿಯರವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕೆಲವು ದಿನಗಳ ಹಿಂದೆ ಕೂಡ ಇಂತಹದೇ ಕೃತ್ಯ ನಡೆದ ಸಂದರ್ಭದಲ್ಲಿ ಪಕ್ಷದ ವತಿಯಿಂದ ವೇಣೂರು ಠಾಣೆಗೆ ದೂರು ನೀಡಿದ್ದರು ಆರೋಪಿಗಳ ವಿರುದ್ಧ ಪೋಲಿಸರು FIR ದಾಖಲಿಸಿದೆ ಮೃದು ಧೋರಣೆ ಅನುಸರಿಸಿದ ಕಾರಣ ಆರೋಪಿಗಳಿಗೆ ಪುನಃ ಇಂತಹದೇ ಕೃತ್ಯ ನೀಡಲು ಪೋಲಿಸರೆ ಅವಕಾಶ ಮಾಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೋಮು ದ್ವೇಷ ಭಾಷಣ ಹಾಗೂ ಅಂತಹ ಕೃತ್ಯಗಳ ವಿರುದ್ಧ ಪೋಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ನ ಆದೇಶ ಇದೆ.ಆದರೆ ವೇಣೂರು ಠಾಣೆಗೆ ದೂರು ನೀಡಿದರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದರಿಂದ ಅಂತಹ ಘಟನೆ ಪುನರಾವರ್ತನೆ ಯಾಗಿದೆ. ಒಂದು ವೇಳೆ ಈ ಬಾರಿಯು ಪೋಲಿಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೆ ಆರೋಪಿಗಳು ಪುನಃ ಹಿಂದು ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸ ಮಾಡಿ ಇಸ್ಲಾಂ ಧರ್ಮವನ್ನು ನಿಂದಿಸುವುದರಲ್ಲಿ ಅನುಮಾನವಿಲ್ಲ.ಹಾಗೂ ಇದರ ಬಗ್ಗೆ ನಾವು ಸುಮ್ಮನೆ ಕೂರಲು ತಯಾರಿಲ್ಲ,ಸಮಸ್ತ ನಾಗರಿಕರನ್ನು ಸೇರಿಸಿಕೊಂಡು ಉಗ್ರ ಹೋರಾಟ ಮಾಡಲಿದ್ದೇವೆ ಹಾಗೂ ನ್ಯಾಯಲಯದಲ್ಲಿ ಆರೋಪಿಗಳ ಹಾಗೂ ಪ್ರಕರಣ ದಾಖಲಿಸದ ಪೋಲಿಸರ ವಿರುದ್ಧವು ಖಾಸಗಿ ದಾವೆ ಹೂಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ
