


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ, ನಿರ್ದೇಶಕರ ಪದಗ್ರಹಣ ಮತ್ತು 2025 ರ ಸಾಧಕರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಎ.11 ರಂದು ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ ಅವರು ನೆರವೇರಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಜಯರಾಜ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘ ಕಳೆದ ವರ್ಷದಲ್ಲಿ ಮಾಡಿದ ಸಾಧನಡಗಳನ್ನು ವಿವರಿಸಿದರು ಮುಂದಿನ ದಿನಗಳಲ್ಲಿಯೂ ಸಂಘವನ್ನು ಮುನ್ನಡೆಸಲು ಎಲ್ಲರ ಸಹಕಾರ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ್ ಎನ್.ಸಂಘದ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ಲತೇಶ್ ಹಾಗೂ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಕ್ಕಪ್ಪ ಹೆಚ್, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಸಂಜಾತ್, ಬೆಳ್ತಂಗಡಿ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೆಸ್ ಚಾಕೋ, ಬೆಳ್ತಂಗಡಿ ಪಟ್ಟಣಪಂಚಾಯತುಮುಖ್ಯ ಅಧಿಕಾರಿ ರಾಜೇಶ್ ಕೆ ಹಾಗೂ ಬೆಳ್ತಂಗಡಿ ಎಸ್.ಡಿ.ಎಮ್ ಅಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಮ್.ಆರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುಷ್ಪಲತಾ ಜೈನ್, ಫಕೀರ, ಶೀನಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ರತ್ನಾವತಿ, ಹಾಗೂ ಶಿಕ್ಷಣ ಇಲಾಖೆಯಲ್ಲಿ ಸಾಧನೆ ಮಾಡಿದ ವಿ.ಕೆ ವಿಟ್ಲ, ಮೋಹನ್ ಬಾಬು, ಮಂಜುನಾಥ, ಕರಿಯಪ್ಪ, ಮಾಸ್ಟರ್ ಚಿನ್ಮಯ್, ಕು। ತನುಶ್ರೀ, ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೇಮಚಂದ್ರ, ಕವನ್, ಅಕ್ಕಮ್ಮ, ಪದ್ಮಪ್ರಿಯ, ಚೇತನಾ, ಸೌಮ್ಯ, ಪೃಥ್ವಿರಾಜ್, ಜಯಾನಂದ ಇವರನ್ನು ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿಗಳ ಹಾಗೂ44 ನಿರ್ದೇಶಕರುಗಳ ಪದಗ್ರಹಣ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಅಮಿತಾನಂದ ಹೆಗ್ಡೆ, ರಾಜ್ಯ ಪರಿಷತ್ ಸದಸ್ಯ ಪ್ರದೀಪ್ ಕುಮಾರ್.ಪಿ, ಕೋಶಾಧಿಕಾರಿ ಶೆಟ್ಟಿ ನಾರಾಯಣ ಸಂಜೀವ, ಸಂಚಾಲಕ ಆನಂದ ಡಿ., ಹಿರಿಯ ಉಪಾಧ್ಯಕ್ಷರಾದ ಗಾಯತ್ರಿ.ಪಿ, ಚಂದ್ರಶೇಖರ, ಪದಾಧಿಕಾರಿಗಳು, ಮತ್ತು ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಅಂತರಿಕ ಲೆಕ್ಕಪರಿಶೋಧಕರು ಗಂಗಾರಾಣಿ ನಾ. ಜೋಶಿ ಪ್ರಾರ್ಥಿಸಿ, ಕಾರ್ಯದರ್ಶಿ ವಿಕಾಶ್ ಕುಮಾರ್ ಪೈ ಸ್ವಾಗತಿಸಿ, ಜಯರಾಜ್ ಜೈನ್ ವರದಿ ವಾಚಿಸಿ ಪ್ರಾಸ್ತಾವಿಸಿದರು. ಶೆಟ್ಟಿ ನಾರಾಯಣ ಸಂಜೀವ ಲೆಕ್ಕಪತ್ರ ಮಂಡಿಸಿದರು. ಅಮಿತಾನಂದ ಹೆಗ್ಡೆ ವಂದಿಸಿದರು. ಪೆರ್ಲ ಬೈಪಾಡಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

