ಬೆಳ್ತಂಗಡಿ : ಇಲ್ಲಿನ ಭೂಮಾಪನ ಇಲಾಖೆಯ ಪರವಾನಿಗೆ ಪಡೆದುಕೊಂಡು ಭೂ ಮಾಪಕರಾಗಿ(ಸರ್ವೆಯರ್) ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್ ರಾವ್ ಅವರು ಲೋ ಬಿಪಿಯಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ಭೂಮಾಪನ ಶಾಖೆಯಲ್ಲಿ ಕಳೆದ 18 ವರ್ಷಗಳಿಂದ ಸರಕಾರದ ಪರವಾನಿಗೆ ಪಡೆದಕೊಂಡು ಭೂಮಾಪಕರಾಗಿ (ಸರ್ವೆಯರ್) ಅಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಬೆಲೂರು ನಿವಾಸಿ ವಿಶ್ವನಾಥ್ ರಾವ್(45) ಅವರು ಬೆಳ್ತಂಗಡಿಯ ಲಾಯಿಲದ ಬಳಿ ಬಾಡಿಗೆ ಮನೆಯಲ್ಲಿ ಫೆ.13 ರಂದು ಬೆಳಗ್ಗೆ ತಿಂಡಿ ತಿಂದು ಕುಳಿತಿದ್ದು. ಈ ವೇಳೆ ಹೃದಯದಲ್ಲಿ ನೋವು ಕಾಣಿಸಿದೆ ತಕ್ಷಣ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಲೋ ಬಿಪಿ ಅಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆವೇಳೆಗೆ ಅವರು ಮೃತಪಟ್ಟಿದ್ದರು