ಬೆಳ್ತಂಗಡಿ; ಉಪಚುನಾವಣೆಯ ಮೂಲಕ ಮತದಾರರು ಕಾಂಗ್ರೆಸ್ ಗೆ ಗೆಲುವಿನ ಗ್ಯಾರಂಟಿ ನೀಡಿದ್ದಾರೆ
ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಪ್ರಧಾನ ಕಾರ್ಯದರ್ಶಿ
ರಕ್ಷಿತ್ ಶಿವರಾಂ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ.
ಗ್ಯಾರಂಟಿ ಯೋಜನೆಯನ್ನು ನುಡಿದಂತೆ ಜನಸಾಮಾನ್ಯರಿಗೆ ಸರ್ಕಾರ ನೀಡಿದೆ.
ಈ ಬದ್ಧತೆಗೆ ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್’ಗೆ ಗೆಲುವಿನ ಗ್ಯಾರಂಟಿಯನ್ನು ಜನತೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಪ್ರಧಾನ ಕಾರ್ಯದರ್ಶಿರಕ್ಷಿತ್ ಶಿವರಾಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.