ಉಪ್ಪಿನಂಗಡಿ: ಜಾಗದ ವಿವಾದಕ್ಕೆ ಸಂಬಂಧಿಸಿ ಪ್ರಗತಿಪರ ಕೃಷಿಕರೋರ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಗೋಳಿತೊಟ್ಟು ಸಮೀಪದ ಆಲಂತಾಯದ ಪೆರ್ಲ ಎಂಬಲ್ಲಿ ನ.8ರ ರಾತ್ರಿ ನಡೆದಿದೆ.
ಪೆರ್ಲ ನಿವಾಸಿ, ಪ್ರಗತಿಪರ ಕೃಷಿಕ ರಮೇಶ್ ಗೌಡ (50) ಕೊಲೆಯಾದ ವ್ಯಕ್ತಿ.
ಅವರನ್ನು ಸಮೀಪದ ಸಂಬಂಧಿ ಹರೀಶ್ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಇಲ್ಲಿನ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.