ಬೆಳ್ತಂಗಡಿ; ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು, ನಗದು ಮತ್ತು ಚಿನ್ನಾವರಣ ಕಳವುಗೈದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಿಂಜೆಯಲ್ಲಿ ನಡೆದಿದೆ.
ಅಂಡಿಂಜೆ ಗ್ರಾಮದ ಪಾಂಡಿಲು ಹೊಸ ಮನೆಯ ಸುಜಾತ ಎಂಬವರು ಅ. 27 ರಂದು ಮನೆಗೆ ಬೀಗ ಹಾಕಿ ಅಳಿಯೂರಿನಲ್ಲಿ ಇರುವ ತವರು ಮನೆಗೆ ತೆರಳಿದ್ದರು. ಅ. 28ರಂದು ಮಧ್ಯಾಹ್ನ ವಾಪಸು ಬಂದಾಗ ಮನೆಯ ಬಾಗಿಲಿನ ಬೀಗ ಒಡೆದಿದ್ದು ಕಂಡುಬಂದಿದೆ. ಪರಿಶೀಲಿಸಿದಾಗ ಕಪಾಟಿನಲ್ಲಿದ್ದ 25,000 ರೂ. ನಗದು ಹಾಗೂ ಐದು ಗ್ರಾಂ ತೂಕದ ಚಿನ್ನದ ಒಂದು ಜತೆ ಬೆಂಡೂಲೆ ಮತ್ತು ನಾಲ್ಕು ಗ್ರಾಂ ತೂಕದ ಉಂಗುರ ಕಳವಾಗಿರುವುದು ತಿಳಿದು ಬಂದಿದೆ.
ಕಳವಾದ ನಗದು ಹಾಗೂ ಸೊತ್ತುಗಳ ಅಂದಾಜು ಮೌಲ್ಯ 80000 ರೂ. ಆಗಿದ್ದು ಕಳ್ಳತನದ ಘಟನೆಯ ಬಗ್ಗೆ ವೇಣೂರು ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ