Home ರಾಜಕೀಯ ಸಮಾಚಾರ ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೇಸ್ ಸೇರ್ಪಡೆ

ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೇಸ್ ಸೇರ್ಪಡೆ

57
0

ಬೆಳ್ತಂಗಡಿ ವಕೀಲರ ಸಂಘದ ಮಾಜಿ ಅಧ್ಯಕ್ಷ, ಆಲ್ ಇಂಡಿಯಾ ಕ್ಯಾಥೋಲಿಕ್ ಅಸೋಸಿಯೇಷನ್ ನ ಕರ್ನಾಟಕ ರಾಜ್ಯ ಸಮಿತಿ ನಿಕಟಪೂರ್ವಧ್ಯಕ್ಷ ಮತ್ತು ಬೆಳ್ತಂಗಡಿ ಸಿರೋ ಮಲಬಾರ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ನ್ಯಾಯವಾದಿ ಸೇವಿಯರ್ ಪಾಲೇಲಿ ಯವರು ಇಂದು ಕಾಂಗ್ರೇಸ್ ಪಕ್ಷವನ್ನು ಸೇರಿದರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪಕ್ಷದ ದ್ವಜ ಮತ್ತು ಶಾಲು ಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಇದೇ ಸಂಧರ್ಭದಲ್ಲಿ ಸೇವಿಯರ್ ಪಾಲೇಲಿ ಯವರ ಮಗ ಕಾನೂನು ವಿದ್ಯಾರ್ಥಿ ಅವಿಶ್ ಎಸ್ ಪಾಲೇಲಿ ಸಹ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸಮಾಜ ಸೇವೆಗೈಯುವ ಇರಾದೆಯಿಂದ ಮನಪೂರ್ವಕವಾಗಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡಿದ್ದು ಮುಂದಿನ ದಿನಗಳಲ್ಲಿ
ಪಕ್ಷದ ಏಳ್ಗೆಗಾಗಿ ತನ್ನ ಕೈಲಾದ ಸೇವೆಗೈಯಲು ಸಿದ್ದನಿರುವುದಾಗಿ ತಿಳಿಸಿದರು.

ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ನಗರ ಸಮಿತಿ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶೀಪಟ್ನ ಮಾತನಾಡಿ ಪಾಲೇಲಿಯವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದ್ದು ರಕ್ಷಿತ್ ಶಿವರಾಮ್ ರವರ ನೇತೃತ್ವದಲ್ಲಿ ಪಕ್ಷದ ಚಟುವಟಿಕೆಗಳನ್ನು ನಡೆಸಲು ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಮಾಜಿ ಜಿ ಪಂ ಸದಸ್ಯರುಗಳಾದ ನಮಿತಾ ಕೆ, ಶೇಖರ್ ಕುಕ್ಕೇಡಿ, ಕೆ ಡಿ ಪಿ ಸದಸ್ಯ ಸಂತೋಷ್ ಕುಮಾರ್, ಮುಖಂಡರುಗಳಾದ ಪ್ರದೀಪ್ ಕೆ ಸಿ, ಸೆಬಸ್ಟಿಯನ್, ಶುಭಕರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here