ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂಘಟನೆಯಾದ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ವತಿಯಿಂದ ಧರ್ಮಸ್ಥಳ ಫೊರೋನಾದ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಸ್ಥಳೀಯ ಸಮಿತಿಯ ಸದಸ್ಯರುಗಳೊಂದಿಗೆ ಚರ್ಚೆ ನಡೆಸಿ ಸಂಘಟನೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.
ಕೆ.ಎಸ್ ಎಂ.ಸಿ ಎ.ಕೇಂದ್ರ ಸಮಿತಿಯ ನಿರ್ದೇಶಕರದ ಫಾ ಆದರ್ಶ್ ಪುದೀಯೇಡತ್ ಹಾಗೂ ಸಂಘಟನೆಯ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ ಅವರು ನೇತೃತ್ವ ವಹಿಸಿದ್ದರು.
ಉಜಿರೆ ಸಂತ ಜಾರ್ಜ್ ಚರ್ಚ್, ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್, ಪುದುವೆಟ್ಟು ಸೈಟ್ ಮೇರಿ ಚರ್ಚ್, ಕಳೆಂಜ ಸೈಂಟ್ ಸೆಬಾಸ್ಟಿಯನ್ ಚರ್ಚ್, ಬಟ್ಯಾಲ್ ಸೈಂಟ್ ಮೇರಿ ಚರ್ಚ್ ಗಳಿಗೆ ಭೇಟಿ ನೀಡಿದ ತಂಡ ಸ್ಥಳೀಯ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡಸಿದರು.
ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಸಂಘಟನೆ ಇದಾಗಿದೆ ಎಂದು ತಿಳಿಸಿದ ನಿರ್ದೇಶಕ ಫಾ ಆದರ್ಶ್ ಪುದೀಯೇಡತ್ ಅವರು ಸಂಘಟನೆಯ ಮುಂದಿನ ಕಾರ್ಯನಿರ್ವಹಣೆ ಹೇಗಿರಬೇಕು ಎಂದು ವಿವರಿಸಿದರು.
ಸಭೆಗಳಲ್ಲಿ ಧರ್ಮಸ್ಥಳ ಚರ್ಚಿನ ಧರ್ಮಗುರುಗಳಾದ ಫಾ. ರೋಕಿ ಮೇನಾಚೇರಿ, ಉಜಿರೆ ಚರ್ಚಿನ ಧರ್ಮ ಗುರುಗಳಾದ ಫಾ ಬಿಜು ಮ್ಯಾಥ್ಯೂ ಅಂಬಾಟ್, ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಮಲಯಾಟಿಲ್, ಕೇಂದ್ರೀಯ ಸಮಿತಿ ಸದಸ್ಯೆ ರೀನಾ ಶಿಬಿ, ಧರ್ಮಸ್ಥಳ ಫೊರೋನ ಅಧ್ಯಕ್ಷ ಜೈಸನ್ ಪಟ್ಟೇರಿ ಅವರು ಹಾಗೂ ಸ್ಥಳೀಯ ಸಮಿತಿಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.