ಬೆಳ್ತಂಗಡಿ; ಕೇಂದ್ರ ದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಮಂಡಿಸಿರುವ ಬಹೆಟ್ ನಿರಾಶದಾಯಕ ಕರನಾಟಕವನ್ನು ಬಜೆಟ್ ನಲ್ಲಿ ಸಂಪೂರ್ಣವಾಗಿ ಕಡಗಣಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡನೆ ಮಾಡಿದ ಬಜೆಟ್ ನಿರಾಶದಾಯಕ. ಇದು ಪೇಪರ್ ನಲ್ಲಿ ಮಾತ್ರ ಘೋಷಣೆ ಎಂಬ ಆಯವ್ಯಯ. ಕರ್ನಾಟಕ ದಿಂದ ರಾಜ್ಯಸಭೆ ಗೆ ಹೋಗಿದ್ದರು ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಿರುವ ಹಣಕಾಸು ಸಚಿವೆ. ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಎನ್ ಡಿ ಎ ಮೈತ್ರಿಕೂಟದ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಬಹುಕೋಟ್ಟಿ ಅನುದಾನ ಕೊಡಲಾಗಿದೆ. ಇದು ಕೆವಲ ಕುರ್ಚಿ ಉಳಿಸಿಕೊಳ್ಳುವ ಬಜ್ಜೆಟ್ . ರಾಜ್ಯಕ್ಕೆ ಮತ್ತೆ ಮಲತಾಯಿ ಧೋರಣೆ ಮಾಡಿರುವುದು ಗೊತ್ತಾಗುತ್ತದೆ. ರಾಜ್ಯದಿಂದ ಅಯ್ಕೆಯಾದ ಬಿಜೆಪಿ ಸಂಸದರು ಮತ್ತೆ ಮೂಕ ಪ್ರೇಕ್ಷಕರಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಬಜೆಟ್ ಬಗ್ಗೆ ಹೊಗಳುತ್ತಾರೆಯೇ ವಿನಾಃ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಚಕಾರ ಎತ್ತುವುದಿಲ್ಲ
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಇಲ್ಲಿಗೆ ಹೆಚ್ಚಿನ ಅನುದಾನ ಕೊಡದಿರುವುದು ಬೇಸರದ ಸಂಗತಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮೋದಿ ಗ್ಯಾರಂಟಿಯಲ್ಲಿ ಏನೂ ಇಲ್ಲ. ಕೇವಲ ಭರವಸೆ. ಲೋಕಸಭೆ ಚುನಾವಣೆಗೆ ಮುನ್ನ ಮಂಡನೆ ಮಾಡಿದ್ದ ಬಜೆಟ್ ನ ಎಷ್ಟು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಟೀಕಿಸುತ್ತಿದ ಬಿಜೆಪಿಯ ನಾಯಕರು ಈಗ ಅದನ್ನು ಬಟ್ಟಿ ಇಳಿಸಿ ಅವರ ಬಜೆಟ್ ನಲ್ಲಿ ಸೇರಿಸಿದ್ದಾರೆ ಎಂದು ಹೇಳಿದ್ದಾರೆ.