ಬೆಳ್ತಂಗಡಿ; ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಜುಲೈ 20 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಮೊಂಟ್ ಫೋರ್ಟ್ ಕಾಲೇಜು ಬೆಂಗಳೂರು, ಎಂ.ಎಸ್.ಸಿ ಮನೋವಿಜ್ಞಾನ ವಿಭಾಗದ ವಿಧ್ಯಾರ್ಥಿ ವಂದನೀಯ ಫಾದರ್ ಜೋಸೆಫ್ ಚೀರನ್ ಇವರು ಆಗಮಿಸಿ, ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮದ ಮೂಲಕ ಲಭಿಸುವ ಪ್ರೇರಣಾ ಪಡೆದು
ಬದುಕನ್ನು ಯಶಸ್ಸುಗೊಳಿಸೋಣ ಎಂದು ತಿಳಿಸಿ, ಪೌಷ್ಟಿಕ ಆಹಾರ ವಿತರಿಸಿದರು.
ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ರವರು, “ನದಿಯು ಸದಾ ತನ್ನ ಎದುರು ಬರುವ ಅಡೆತಡೆಗಳನ್ನು ಹಿಮ್ಮೆಟ್ಟಿ ಮುಂದೆ ಚಲಿಸುವಂತೆ ನಮ್ಮ ಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ದಿಟ್ಟ ತನದಿಂದ ಎದುರಿಸಿ, ಮುನ್ನಡೆಯ ಬೇಕು ಹಾಗು ಸಂಸ್ಥೆಯು ಸದಾ ಈ ಉದ್ದೇಶಕ್ಕೆ ಸಹಕಾರ ನೀಡಲಿದೆ” ಎಂದರು.
ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪ ಪ್ರಾರ್ಥನೆ ಹಾಡಿದರು.
ಡಿ.ಕೆ.ಆರ್.ಡಿ. ಎಸ್. ಸಂಸ್ಥೆಯ ಸoಯೋಜಕಿ ಶ್ರೇಯಾ ಸ್ವಾಗತಿಸಿದರು.
ನವ ಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮದ ಸದಸ್ಯೆ ಶಶಿಕಲಾ ವಂದಿಸಿದರು.
ಕಾರ್ಯಕರ್ತರಾದ ಮಾರ್ಕ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.