Home ಸ್ಥಳೀಯ ಸಮಾಚಾರ ಹಿರಿಯ ಸಾಹಿತಿ ನಿವೃತ್ತ ಉಪನ್ಯಾಸಕ ಪ್ರೊ.ಎನ್. ಜಿ ಪಟವರ್ಧನ್ ನಿಧನ

ಹಿರಿಯ ಸಾಹಿತಿ ನಿವೃತ್ತ ಉಪನ್ಯಾಸಕ ಪ್ರೊ.ಎನ್. ಜಿ ಪಟವರ್ಧನ್ ನಿಧನ

444
0

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಉಪನ್ಯಾಸಕ ಹಿರಿಯ ಸಾಹಿತಿ ಪ್ರೊ.ಎನ್.ಜಿ ಪಟವರ್ಧನ್ ಅಲ್ಪಕಾಲದ ಅಸೌಖ್ಯದಿಂದ ಉಜ್ರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1ರಂದು ನಿಧನ ಹೊಂದಿದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಮುಂಡಾಜೆ ಗ್ರಾಮದ ಕಡಂಬಳ್ಳಿ ಮೂಲದವರಾದ ಅವರು
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ 32 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ ಹಂಸಧ್ವನಿ ಪ್ರಕಾಶನದ ಮೂಲಕ
ಕನ್ನಡ ವ್ಯಾಕರಣದ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದ ಅವರ ಹಲವು ಕವನ ಸಂಕಲನಗಳು ಹಾಗೂ ಇತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಾಲೂಕು ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
ಉಜಿರೆಯ ಶಿವಾಜಿನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು ಪ್ರೇಮ ಲಹರಿ,ಅಕ್ಷಯ, ಮಾನಸ, ಚಿಲುಮೆ, ಸಿಂಚನ,ತುಂತುರು, 200 ಮುಕ್ತಕಗಳು, ಹೂಮಳೆ, ಸಾವಿರಾರು ಮುಕ್ತಕಗಳು, 58 ಕವನಗಳು ಇತ್ಯಾದಿ ಕವನ ಸಂಕಲನ ಮೃತ್ಯುಂಜಯದ ಮಡಿಲಲ್ಲಿ, ಮುಗುಳ್ನಗೆ,ತೆರೆದ ಮನ,ವಿಚಾರ ವಿಹಾರ ಮೊದಲಾದ ಪ್ರಬಂಧ ಸಂಕಲನ, ಸ್ಥಿತ್ಯಂತರ ಮತ್ತು ಇತರ ಕಥೆಗಳು ಕೊರಡು ಕೊನರಿತು, ಮರೀಚಿಕೆ ಮೊದಲಾದ ಕಥಾ ಸಂಕಲನ, ಅದ್ಭುತ ರಾಮಾಯಣ ಅನುವಾದ,ಛಂದಸ್ಸಾರ, ಸಾಹಿತ್ಯ ಕ್ಷೇತ್ರಕ್ಕೆ ಬೆಳ್ತಂಗಡಿ ತಾಲೂಕಿನ ಕೊಡುಗೆ, ಬಾಳ ಪಯಣ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
2014ರಲ್ಲಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಚುಟುಕು ಭಾರ್ಗವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅವರ ಅನೇಕ ಬರಹಗಳು, ಚುಟುಕುಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

LEAVE A REPLY

Please enter your comment!
Please enter your name here