ಬೆಳ್ತಂಗಡಿ:ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಮದ್ದಡ್ಕದ ಮೈದಾನದಲ್ಲಿ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ ನಡೆಯಿತು.ದ್ವಜಾರೋಹಣವನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿದಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಸ್ವಾಲಿ ಮದ್ದಡ್ಕ ನೆರೆವೇರಿಸಿದರು ,ಅದ್ಯಕ್ಷತೆಯನ್ನು ಮದ್ದಡ್ಕ ಬೂತ್ ಸಮಿತಿ ಅದ್ಯಕ್ಷರಾದ ಹಮೀದ್ ಆಲಂದಿಲ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ,ಅನ್ವರ್ ಲ್ ಹಿದಾಯ ಪಾದೆ ಮದರಸ ಕಾರ್ಯದರ್ಶಿ ಮನ್ಸೂರ್ ಪಾದೆ,ಅನ್ವರ್ ಲ್ ಹಿದಾಯ ಮದರಸ ಮಾಜಿ ಅದ್ಯಕ್ಷರಾದ ಆರೀಸ್ ಶಾಫಿ,ಅಲ್ಲದೇ ಪಕ್ಷದ ಕಾರ್ಯಕರ್ತರು ,ಹಿತೈಷಿಗಳು ಉಪಸ್ಥಿತರಿದ್ದರು.