ಬೆಂಗಳೂರು; ಮೋದಿ 3ಸಚಿವ ಸಂಪುಟದಲ್ಲಿ ಇದೀಗ ಖಾತೆಗಳ ಹಂಚಿಕೆ ನಡೆದಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಐವರು ಸಚಿವರುಗಳಿಗೂ ಮಹತ್ವದ ಖಾತೆಗಳೇ ಲಭಿಸಿರುವುದು ವಿಶೇಷ.
ಕಳೆದ ಬಾರಿಯಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯೂ ಹಣಕಾಸು ಖಾತೆಯನ್ನೇ ನೀಡಲಾಗಿದೆ.
ಆಪತ್ಕಾಲದಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ, ಪ್ರಲ್ಹಾದ್ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಿಕ್ಕಿದೆ. ಇನ್ನುಳಿದಂತೆ ಶೋಭಾ ಕರಂದ್ಲಾಜೆ ಅವರಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಸ್ಥಾನ ನೀಡಲಾಗಿದೆ. ಸೋಮಣ್ಣ ಜಲ ಶಕ್ತಿ ಮತ್ತು ರೈಲ್ವೇ ಸಹಾಯಕ ಸಚಿವರಾಗಿರಲಿದ್ದಾರೆ.