ಬೆಳ್ತಂಗಡಿ; ಕೊಯ್ಯೂರು ರಸ್ತೆಯ ಪಿಜಕಳ ಎಂಬಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಹೆಮ್ಮರ ರಸ್ತೆಗೆ ಉರುಳುತ್ತಿರುವುದನ್ನುಗಮನಿಸಿದ ಬೈಕ್ ಸವಾರ ಬೈಕ್ ಅನ್ನು ನಿಲ್ಲಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿದರು.
ಕೊಯ್ಯೂರು ರಸ್ತೆಯ ಬದಿಯಲ್ಲಿ ಯಾವುದೇ ಕ್ಷಣದಲ್ಲಿ ನೆಲಕ್ಕೆ ಉರುಳುವ ರೀತಿಯಲ್ಲಿ ನಿಂತಿದ್ದು ಈ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಅನಾಹುತಗಳು ಸಂಭವಿಸುವ ಮೊದಲು ರಸ್ತೆಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ.