ಬೆಳ್ತಂಗಡಿ:
ಲಾರಿಯೊಂದು ಒಮ್ಮಿ ಕಾರಿಗೆ ಡಿಕ್ಕಿ ಹೊಡೆದ
ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಒಮ್ಮಿ ಕಾರಿಗೆ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆ ಬರುತಿದ್ದ ಮೆಸ್ಕಾಂ ಇಲಾಖೆಯ ಲಾರಿ ಬಣಕಲ್ ಕೊಟ್ಟಿಗೆಹಾರ ಮಧ್ಯೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಒಮ್ಮಿ ಕಾರು ಸಂಪೂರ್ಣ ಜಖಂ ಗೊಂಡು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಎಂದು ತಿಳಿದು ಬಂದಿದೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂದು ತಿಳಿದು ಬರಬೇಕಾಗಿದೆ.