Home ಶಾಲಾ ಕಾಲೇಜು ವಿದ್ವತ್ ಚೆಸ್ ಚಾಂಪಿಯನ್ ಟ್ರೋಫಿ ಸಮಾರೋಪ; ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ...

ವಿದ್ವತ್ ಚೆಸ್ ಚಾಂಪಿಯನ್ ಟ್ರೋಫಿ ಸಮಾರೋಪ; ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ ಕುಮಾರಸ್ವಾಮಿ ವಿದ್ಯಾಲಯ ದ್ವಿತೀಯ, ಆಸಿಸಿ ಸೆಂಟ್ರಲ್ ಶಾಲೆಗೆ ತೃತೀಯ ಸ್ಥಾನ

0
3

ಬೆಳ್ತಂಗಡಿ, ನ.29: ಗುರುವಾಯನಕೆರೆ ವಿದ್ವತ್ ಎಜುಕೇಶನ್ ಫೌಂಡೇಶನ್ ವತಿಯಿಂದ ಉಬಾರ್ ಚೆಸ್ ಅಕಾಡೆಮಿ ಮತ್ತು (ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್) ಸಹಯೋಗದಲ್ಲಿ ನ.27 ರಂದು ನಡೆದ ಅಂತರ್ ಜಿಲ್ಲಾ ಶಾಲಾ ಮಟ್ಟದ ರಾಪಿಡ್ (RAPID) ಚೆಸ್ ಪಂದ್ಯಾವಳಿ ವಿದ್ವತ್ ಚೆಸ್ ಟ್ರೋಫಿ–2026 ನ್ನು ಬೆಳ್ತಂಗಡಿ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಮುಡಿಗೇರಿಸಿತು.

ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಅಂಡರ್ ಯು.ಕೆ.ಜಿ., ಯು.ಕೆ.ಜಿ. ಸಹಿತ 8, 10, 12, 14, 16 ಹಾಗೂ 18 ವರ್ಷ ವಯೋಮಾನದೊಳಗೆ ಒಟ್ಟು 5 ಮತ್ತು 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ತಂಗಡಿ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ (47) ಅಂಕದೊಂದಿಗೆ ಸಮಗ್ರ ಪ್ರಶಸ್ತಿ ತನ್ನದಾಗಿಸಿತು. ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯ (38) ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೇರಿದರೆ, ದೇರಳಕಟ್ಟೆ ಆಸಿಸಿ ಸೆಂಟ್ರಲ್ ಶಾಲೆ (34) ಅಂಕದೊಂದಿಗೆ ತೃತೀಯ ಸ್ಥಾನ ಪಡೆದು ಸಂಭ್ರಮಿಸಿತು.

ಉಳಿದಂತೆ ಪುತ್ತೂರು ಸೈಂಟ್ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ ಚತುರ್ಥ, ಜವಾಹರ್ ನವೋದಯ ವಿದ್ಯಾಲಯ 5ನೇ ಸ್ಥಾನ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ 6ನೇ ಸ್ಥಾನ, ವಾಣಿ ಆಂಗ್ಲ ಮಾಧ್ಯಮ ಶಾಲೆ 7ನೇ ಸ್ಥಾನ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ 8ನೇ ಸ್ಥಾನ, ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ 9 ನೇ ಸ್ಥಾನ, ವಿಟ್ಲ ಸೈಂಟ್ ರೀಟಾ ಶಾಲೆ 10 ನೇ ಸ್ಥಾನದೊಂದಿಗೆ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಭಾಜನರಾದರು.

ಮುಖ್ಯ ಅತಿಥಿ ಬೆಳ್ತಂಗಡಿ ಉದ್ಯಮಿ ಭಗತ್ ರಾಮ್ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದ ಚೆಸ್ ಪಂದ್ಯಾಕೂಟ ಆಯೋಜನೆ ಮಾಡುವ ಮೂಲಕ ವಿದ್ವತ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆಗೊಂದು ವೇದಿಕೆ ಕಲ್ಪಿಸಿದೆ. ಯಾವುದೇ ಸ್ಪರ್ಧೆ ನಮ್ಮ ಜೀವನದ ಗುರಿಯನ್ನು ನಿರ್ಧರಿಸುವುದಿಲ್ಲ, ಆದರೆ ನಮ್ಮ ಗುರಿಯೆಡೆಗೆ ತಲುಪುವಲ್ಲಿ ಅನುಭವವನ್ನು ನೀಡುತ್ತದೆ. ಎಲ್ಲ ವಿಜೇತರು ಭವಿಷ್ಯದ ಉತ್ತಮ ಪ್ರಜೆಯಾಗಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ವತ್ ಚೆಸ್ ಪಂದ್ಯಾಕೂಟಕ್ಕೆ ಸ್ಪರ್ಧಿಗಳು ಆಗಮಿಸಿರುವುದು ಸಂತಸ ತಂದಿದೆ. ಪಂದ್ಯಾಕೂಟಅಚ್ಚುಕಟ್ಟಾಗಿ‌ ಆಯೋಜನೆ ಮಾಡಿದ ಉಬಾರ್ ಚೆಸ್ ಅಕಾಡೆಮಿ ಹಾಗೂ ಇದಕ್ಕೆ ಸಹಕರಿಸಿದ ಜಿಲ್ಲಾ ಚೆಸ್ ಸಂಘಟನೆ ಹಾಗೂ ಪೋಷಕರಿಗೆ, ಶಾಲೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಉಬಾರ್ ಚೆಸ್ ಅಕಾಡೆಮಿ ನಿರ್ದೇಶಕರಾದ ಜಗನ್ನಾಥ ಅಡಪ ಅವರನ್ನು ವಿದ್ವತ್ ಕಾಲೇಜು ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

ಸ್ಪರ್ಧಾ ಕಾರ್ಯಕ್ರಮದ ಫೋಟೋ ವಾಟ್ಸ್ ಪ್ ಮೂಲಕ ಹಂಚಿಕೊಂಡು ಅತ್ಯಧಿಕ ವೀವ್ಸ್ ಪಡೆದುಕೊಂಡವರಿಗೆ ಮೀಸಲಿರಿಸಿದ ಸ್ಪರ್ಧೆಯಲ್ಲಿ ಕಡಬದ ಯೋಗೀಶ್ ಜಿ.ಸಿ, ಪ್ರಥಮ, ಸಂತೋಶ್ ಶೆಟ್ಟಿ ದ್ವಿತೀಯ, ಜಯರಾಜ್ ಕಡಬ ತೃತೀಯ ಸ್ಥಾನ ಪಡೆದರು.

ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಕಾಶಿನಾಥ್ ಎಂ.ಕೆ., ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ವತ್ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಬಾರ್ ಚೆಸ್ ಅಕಾಡೆಮಿಯ ಶಿಕ್ಷಕಿ ಭವ್ಯಾ ಸ್ಪರ್ಧಿಗಳ ವಿವರ ನೀಡಿದರು.

ಬಾಕ್ಸ್
264 ಟ್ರೋಫಿ ವಿತರಣೆ

ವಿದ್ವತ್ ಚೆಸ್ ಟ್ರೋಫಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಯುಕೆಜಿ ಸಹಿತ 8, 10, 12, 14, 16 ಹಾಗೂ 18 ವರ್ಷ ವಯೋಮಾನದೊಳಗೆ ಜಿಲ್ಲೆಯ ವಿವಿಧೆಡೆಯದ 500 ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಒಟ್ಟು 264 ಟ್ರೋಫಿ ಇರಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಲಾಗಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ವಿದ್ವತ್ ಕಾಲೇಜು ವಿಶೇಷ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ ಎಂದು ಉಬಾರ್ ಚೆಸ್ ಅಕಾಡೆಮಿ ನಿರ್ದೇಶಕರಾದ ಜಗನ್ನಾಥ ಅಡಪ ಹರ್ಷ ವ್ಯಕ್ತಪಡಿಸಿದರು.

ಫೋಟೋ: ವಿದ್ವತ್ ಚೆಸ್ ಟ್ರೋಫಿ ಸಮಗ್ರ ಪ್ರಶಸ್ತಿ ಪಡೆದ ಬೆಳ್ತಂಗಡಿ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು.

ಫೋಟೋ: ದ್ವಿತೀಯ ಸ್ಥಾನ ಪಡೆದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯ ವಿದ್ಯಾರ್ಥಿಗಳು.

NO COMMENTS

LEAVE A REPLY

Please enter your comment!
Please enter your name here