Home ಸ್ಥಳೀಯ ಸಮಾಚಾರ ಭಾರತ ಪಂಚರತ್ನ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರಿಗೆ ಸನ್ಮಾನ: ಶಿಕ್ಷಣ ಕ್ಷೇತ್ರದಲ್ಲಿ...

ಭಾರತ ಪಂಚರತ್ನ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರಿಗೆ ಸನ್ಮಾನ: ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಹಾಜಬ್ಬರಷ್ಟೇ ಸೇವೆ ಲೆತೀಫ್ ಸಾಹೇಬ್ ಸಲ್ಲಿಸಿದ್ದಾರೆ;  ಜಿಲ್ಲಾಧ್ಯಕ್ಷ ಅಶ್ಪಾಕ್ ಅಹಮ್ಮದ್

2
0

ಬೆಳ್ತಂಗಡಿ; ಶಿಕ್ಷಣ ಕ್ಷೇತ್ರದಲ್ಲಿ ಅಬ್ದುಲ್ ಲೆತೀಫ್ ಸಾಹೇಬ್ ಅವರು ಪದ್ಮಶ್ರೀ ಹಾಜಬ್ಬ ಅವರಿಗಿಂತ ಹೆಚ್ಚಿನ ಸೇವೆ ಮಾಡಿದ್ದಾರೆ ಎಂಬ ಹೆಮ್ಮೆ ಇದೆ. ಅವರ ಸೇವೆ ಸಮಾಜ ಗುರುತಿಸಿ ಮುಂದಕ್ಕೆ ಅವರಿಗೆ ಇನ್ನಷ್ಟು ಉನ್ನತ ಅವಕಾಶಗಳು ಲಭಿಸಲಿ ಎಂದು ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷರಾಗಿರುವ ಅಶ್ಪಾಕ್ ಅಹಮ್ಮದ್ ಕಾರ್ಕಳ ಅವರು ಹೇಳಿದರು.

ಜಮೀಯ್ಯತುಲ್ ಫಲಾಹ್ ದ.ಕ ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ಘಟಕದ ಸಂಸ್ಥಾಪಕರು ಹಾಗೂ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದು ಕರ್ನಾಟಕ ಕಾರ್ಮಿಕ ಸಂಘದ ವತಿಯಿಂದ ರಾಷ್ಟ್ರ ಮಟ್ಟದ “ಭಾರತ ಪಂಚರತ್ನ” ಪ್ರಶಸ್ತಿಯೊಂದಿಗೆ ಪುರಸ್ಕೃತರಾಗಿರುವ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸರ್ ಕೆ.ಕೆ ಅವರು ಶುಭ ಹಾರೈಸಿ ಮಾತನಾಡಿದರು.

ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ಜೈನ್ ಲಾಯಿಲ ಅಭಿನಂದನಾ ಭಾಷಣ ಮಾಡಿ, ಮಾಲಾಡಿ ಸರಕಾರಿ ಶಾಲೆ ಉನ್ನತೀಕರಣ, ಪುಂಜಾಲಕಟ್ಟೆ ಕಾಲೇಜು, ಮಾಲಾಡಿ ಐಟಿಐ ಸಂಸ್ಥಾಪನೆಯ ಸಂದರ್ಭದಲ್ಲಿ ಹಾಗೂ ಶಾಲೆಯ ಮೇಲ್ದರ್ಜೆಗೆ ಏರಲು ಸಲ್ಲಿಸಿದ ಸೇವೆಗಳು, ಸೋಣಂದೂರು ಸರಕಾರಿ ಶಾಲೆಗೆ ನೀಡಿದ‌ ನೆರವು, ಶಿಕ್ಷಣಕ್ಕೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡುತ್ತಿರುವ ಪ್ರೋತ್ಸಾಹಗಳನ್ನು ನೆನಪಿಸಿ ಮಾತನಾಡಿದರು.

ಅಭಿನಂದನೆ ಸ್ವೀರಕರಿಸಿ ಮಾತನಾಡಿದ ಹಾಜಿ‌ ಅಬ್ದುಲ್‌ ಲೆತೀಫ್ ಅವರು, ಸಂಘ ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತೂ ಪ್ರಶಸ್ತಿಗಾಗಿ‌ ಕೆಲಸ ಮಾಡಿಲ್ಲ. ದೇವರ ಮಾರ್ಗದಲ್ಲಿ ಪ್ರಾಮಾಣಿಕ ಸೇವೆ ಮಾತ್ರ ಮಾಡುತ್ತಾ ಬಂದಿದ್ದೇನೆ. ಅದು ನನ್ನ ಕೊನೇಯ ಉಸಿರಿರುವವರೆಗೆ ಮಾಡುತ್ರೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ತಾ. ಘಟಕದ ಅಧ್ಯಕ್ಷ ಖಾಲಿದ್ ಪುಲಾಬೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕೋಶಾಧಿಕಾರಿ ಎಸ್‌ಎಂಎಸ್ ಇಬ್ರಾಹಿಂ ಮುಸ್ಲಿಯಾರ್ ಉಪಸ್ಥಿತರಿದ್ದರು.

ಘಟಕದ ಮಾಜಿ ಅಧ್ಯಕ್ಷ ಆಲಿಯಬ್ಬ ಪುಲಾಬೆ ಸ್ವಾಗತಿಸಿ ಪ್ರಸ್ತಾವನೆಗೈದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ‌ ನಿರೂಪಿಸಿದರು. ಸಯ್ಯಿದ್ ಹಬೀಬ್ ಸಾಹೇಬ್ ಖಿರಾಅತ್ ಪಠಿಸಿದರು. ಕಾರ್ಯದರ್ಶಿ ಉಮರ್ ಬೆಳ್ತಂಗಡಿ ಧನ್ಯವಾದ ಸಲ್ಲಿಸಿದರು.
ಘಟಕದ ಮಾಜಿ ಅಧ್ಯಕ್ಷರುಗಳು, ಆಜೀವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here