
ಬೆಳ್ತಂಗಡಿ; ಉಕ್ಕಿನ ಮಹಿಳೆ ದೇಶದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಯವರ 113 ನೇ ಹುಟ್ಟು ಹಬ್ಬವನ್ನು ಗುರುವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮೀಣ ಘಟಕ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಕ್ಷದ ಹಿರಿಯ ಮುಖಂಡೆ ಹಾಗು ಸೌತಡ್ಕ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯೆ ಲೋಕೇಶ್ವರಿ ವಿನಯಚಂದ್ರ ಪುಷ್ಪಾರ್ಚನೆ ಮಾಡಿ ಇಂದಿರಾ ಗಾಂಧಿಯವರ ಮುಖಂಡತ್ವವನ್ನು ಕೊಂಡಾಡಿದರು.ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಸಮಯದಲ್ಲಿ ಲೋಕೇಶ್ವರಿಯವರನ್ನು ಇಂದಿರಾ ಗಾಂಧಿಯವರು ತನ್ನೊಂದಿಗೆ ಕರೆದೊಯ್ಯುತ್ತಿದ್ದುದನ್ನು ನೆನಪಿಸಿಕೊಂಡರು
ಪಕ್ಷದ ಮುಖಂಡರುಗಳಾದ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ,ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶೋಭಾ ನಾರಾಯಣ ಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜೀನತ್ ಉಜಿರೆ,ಬ್ಲಾಕ್ ಮಹಿಳಾ ಗ್ರಾಮೀಣ ಘಟಕ ಕಾರ್ಯದರ್ಶಿ ಶ್ರೀಮತಿ ಪುಷ್ಪ ನೆರಿಯ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.










