Home ಸ್ಥಳೀಯ ಸಮಾಚಾರ ಧರ್ಮಸ್ಥಳ ಪ್ರಕರಣ ಹೋರಾಟಗಾರ ಜಯಂತ್ ಟಿ ಅವರಿಂದ‌ ಲೋಕಾಯುಕ್ತಕ್ಕೆ ದೂರು

ಧರ್ಮಸ್ಥಳ ಪ್ರಕರಣ ಹೋರಾಟಗಾರ ಜಯಂತ್ ಟಿ ಅವರಿಂದ‌ ಲೋಕಾಯುಕ್ತಕ್ಕೆ ದೂರು

1
0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಎಸ್.ಐ.ಟಿ ತಂಡ ಧರ್ಮಸ್ಥಳದ ಲ್ಲಿ ಪತ್ತೆಯಾಗಿರುವ ಅಸಹಜ ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ತನಿಖೆ‌ನಡೆಸಲು ಅನುಮತಿ ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿ ಏಳು ತಿಂಗಳು ಕಳೆದಿದ್ದರೂ ಇನ್ನೂ ಈ ಬಗ್ಗೆ ಕ್ರಮ‌ ಕೈಗೊಳ್ಖದಿರುವ ಬಗ್ಗೆ ಹೋರಾಟಗಾರ ಜಯಂತ್ .ಟಿ ಅವರು ಸರಕಾರಿ ಅಧಿಕಾರಿಗಳ‌ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
2026 ರ ಮಾ24 ರ‌ಂದು ಈ ಬಗ್ಗೆ ಸರಕಾರಕ್ಕೆ ವರದಿ ನೀಡಲಾಗಿದೆ ಆದರೆ ಮುಂದಿನ ತನಿಖೆಗೆ ಅಗತ್ಯ ಅನುಮತಿ ಹಾಗೂ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ಅಧಿಕಾರಿಗಳು ತನಿಖೆಗೆ ಅವಕಾಶ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here