Home ಸ್ಥಳೀಯ ಸಮಾಚಾರ ಮಡಂತ್ಯಾರಿನಲ್ಲಿ  ಅವೈಜ್ಞಾನಿಕ ಹೆದ್ದಾರಿ‌ ಕಾಮಗಾರಿ ಗ್ರಾಮಸ್ಥರಿಂದ‌ ಪ್ರತಿಭಟನೆ

ಮಡಂತ್ಯಾರಿನಲ್ಲಿ  ಅವೈಜ್ಞಾನಿಕ ಹೆದ್ದಾರಿ‌ ಕಾಮಗಾರಿ ಗ್ರಾಮಸ್ಥರಿಂದ‌ ಪ್ರತಿಭಟನೆ

2
0

ಮಡಂತ್ಯಾರು : ಮಡಂತ್ಯಾರ್ ನಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದು ಜನರ ಜೀವಕ್ಕೆ ಅಪಾಯಕಾರಿಯಾಗಿದೆ, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಟೋ ನಿಲ್ದಾಣ ಸೇರಿದಂತೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸರ್ವೀಸ್ ರಸ್ತೆ ಇಲ್ಲದೆ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಮಡಂತ್ಯಾರಿನ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪುನೀತ್ ಹೇಳಿದರು.

ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಡೆಯನ್ನು ಖಂಡಿಸಿ ಮಡಂತ್ಯಾರಿನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಅ.22ರಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಉಜಿರೆಯಿ೦ದ ಮಂಗಳೂರು ಕಡೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಿಗುವ, ಅತ್ತ ವೇಣೂರು ಕಡೆಯಿಂದಲೂ ಬರುವವರಿಗೆ ಇತ್ತ ಉಪ್ಪಿನಂಗಡಿ ಕಕ್ಕೆಪದವು ಕಡೆಯವರಿಗೂ ಮಡಂತ್ಯಾರು ಕೇಂದ್ರಸ್ಥಾನವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರ ಕಣ್ಣಿಗೆ ಮಣ್ಣೆರಚಿ, ನಿಯಮಾನುಸಾರ ರಸ್ತೆ ನಿರ್ಮಿಸದೆ, ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿ, ಅನೇಕ ಜನರ ಸಾವು ನೋವಿಗೆ ಕಾರಣವಾಗಿದೆ.

ಈಗಾಗಲೇ ಈ ರೀತಿಯ ಅವೈಜ್ಞಾನಿಕ ವಿಧಾನದ ರಸ್ತೆ ನಿರ್ಮಾಣದಿಂದ ರಸ್ತೆ ಅಪಘಾತದಲ್ಲಿ ಅನೇಕ ಜನ ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ಕೆಲವರು ಗಂಭೀರ ಗಾಯಗೊಂಡಿರುತ್ತಾರೆ. ನಾಗರಿಕರ ಹಿತವನ್ನು ನೋಡದೆ ಒಮ್ಮೆ ಕೆಲಸ ಮುಗಿಸುವ ತರಾತುರಿಯಲ್ಲಿ ಮಡಂತ್ಯಾರು ಪೇಟೆಯ ಪಾರ್ಕಿಂಗ್ ವ್ಯವಸ್ಥೆ ಅಸ್ಥವಸ್ಥೆ ಆಗಿದೆ, ಇದೀಗ ಶಾಂತ ರೀತಿಯ ಪ್ರತಿಭಟನೆ ಕೈಗೊಂಡಿದ್ದು, ಸ್ಪಂದನೆ ಸಿಗದೆ ಹೋದರೆ ಮುಂದೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಡಂತ್ಯಾರ್‌ನ ಸೇವಾ ಸಹಕಾರಿ ಬ್ಯಾಂಕು ಬಳಿಯಿಂದ ಮೆರವಣಿಗೆ ಮೂಲಕ ಪ್ರತಿಭಟನೆ ಸಾಗಿ ಬಂದು ಸಾಗಿ ಮಡಂತ್ಯಾ‌ರ್ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.ಮಚ್ಚಿನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಮೋದ್ ಬಳ್ಳಮಂಜ, ಮಡಂತ್ಯಾರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪಡ್ಡು, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ವಿನ್ಸೆಂಟ್ ಡಿ ಸೋಜಾ, ಯುನೈಟೆಡ್ ಮಾಲಾಡಿಯ ಅಧ್ಯಕ್ಷ ಕೆ.ಮಹಮ್ಮಾದಲಿ, ಆಟೋ ಚಾಲಕ ಹಮೀದ್‌ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಅಭಿಯಂತರ ಗುರುಪ್ರಸಾದ್, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಹಾಗೂ ಸಮಸ್ಯೆಗಳನ್ನು ಆಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಯೋಗೀಶ್ ಕೊಡ್ಲಕ್ಕೆ ಕ್ಲಿಪರ್ಡ್ ಡಿಸೋಜಾ, ಬಶೀರ್, ಇಲಿಯಾಸ್, ಬಾಬಿ ಹಾಗೂ ಇತರರು ವರ್ತಕರು, ಆಟೋ ಚಾಲಕರು, ಪಿಕಪ್ ಚಾಲಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಸುಕೇಶ್ ಮಾಲಾಡಿ ಅವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು

LEAVE A REPLY

Please enter your comment!
Please enter your name here