Home ಕ್ರೀಡಾ ಸಮಾಚಾರ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ನವರಾತ್ರಿ ಪ್ರಯುಕ್ತ ಕೇರಂ ಪಂದ್ಯಾಟ

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ನವರಾತ್ರಿ ಪ್ರಯುಕ್ತ ಕೇರಂ ಪಂದ್ಯಾಟ

0
2

ಮುಂಡಾಜೆ: ರಾಜ್ಯದ ಪ್ರತಿಷ್ಠಿತ ಕ್ರೀಡಾ‌ ಸಂಘ ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಅ.11 ರಂದು ನವರಾತ್ರಿಯ ಪ್ರಯುಕ್ತ ಕೇರಂ ಪಂದ್ಯಾಟ ನಡೆಯಿತು.
ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ್ ರಾವ್, ನಾರಾಯಣ ಗೌಡ ದೇವಸ್ಯ, ನಂದೀಶ್ ಭಂಡಾರಿ, ಸಂಘದ ನಿರ್ದೇಶಕ ಪರಮೇಶ್ವರ್ ಮೊದಲಾದವರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ವಿಜಯ ಕುಮಾರ್, ಉಪಾಧ್ಯಕ್ಷ ಪುಷ್ಪರಾಜ್, ನಾರಾಯಣ ಗೌಡ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಸಂಚಾಲಕ ನಾಮದೇವ್ ರಾವ್ ಸ್ವಾಗತಿಸಿದರು.
ಕೇರಂ ಫಲಿತಾಂಶ: ದೇವಿಪ್ರಸಾದ್ – ಅವಿನಾಶ್ (ಪ್ರ), ಹೇಮಂತ್ ಶೆಟ್ಟಿ – ದಿನೇಶ್ (ದ್ವಿ), ಗುರು ಮುಂಡಾಜೆ – ನಾರಾಯಣ್ ಗೌಡ ದೇವಸ್ಯ (ತೃ), ಪುಷ್ಪರಾಜ್ ಶೆಟ್ಟಿ- ವಸಂತ್ ಶೆಟ್ಟಿ ಮುಂಡಾಜೆ (ಚ) ಬಹುಮಾನ ಪಡೆದುಕೊಂಡರು.

NO COMMENTS

LEAVE A REPLY

Please enter your comment!
Please enter your name here