Home ಅಪರಾಧ ಲೋಕ ಪತ್ನಿ ಅಸಹಜ ಸಾವಿನ ಬೆನ್ನಲ್ಲೇ ಪತಿ  ನೇಣುಬಿಗಿದು ಆತ್ಮಹತ್ಯೆ

ಪತ್ನಿ ಅಸಹಜ ಸಾವಿನ ಬೆನ್ನಲ್ಲೇ ಪತಿ  ನೇಣುಬಿಗಿದು ಆತ್ಮಹತ್ಯೆ

0
2

ಬೆಳ್ತಂಗಡಿ : ಪತ್ನಿಯ ಮೃತದೇಹ ಅಸಹಜ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾದ ಬೆನ್ನಲ್ಕಿಯೇ ಪತಿ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಶಿಲ ಗ್ರಾಮದಲ್ಲಿ ಸಂಭವಿಸಿದೆ.

ಇಲ್ಲಿಯ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಎಂಬವರೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

ಎರಡು ಮೂವರು ದಿನಗಳಿಂದ ತನಿಯಪ್ಪ ರವರು ಎಲ್ಲಿಯೂ ಪತ್ತೆಯಾಗದ ಕಾರಣ ಶೌರ್ಯ ವಿಪತ್ತು ನಿರ್ವಹಣಾ ತಂಡ ಸದಸ್ಯರಾದ ರಾಧಾಕೃಷ್ಣ ಗುತ್ತು, ಕುಶಾಲಪ್ಪ ಗೌಡ ಬದ್ರಿಜಾಲು, ಸುಬ್ರಾಯ ಗೌಡ ಬದ್ರಿಜಾಲು, ಶೀನಪ್ಪ ನಾಯ್ಕ ಮುಚ್ಚಿರಡ್ಕ ರವರು ಹುಡುಕಾಟ ನಡೆಸಿದಾಗ ತನಿಯಪ್ಪ ಗೌಡರು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಇತ್ತೀಚೆಗೆ ಅವರ ಪತ್ನಿ ಚಿನ್ನಮ್ಮ ರವರ ಮೃತದೇಹ ಅವರ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಈ ಬಗ್ಗೆ ಚಿನ್ನಮ್ಮ ರವರ ಸಹೋದರ ಗಂಗಾಧರ ಗೌಡರವರು ಮೃತರ ಮರಣದಲ್ಲಿ ಸಂಶಯ ಕಂಡು ಬರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪತಿ ತನಿಯಪ್ಪ ರವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು ಪೊಲೀಸರ ತನಿಖೆಯಿಂದ ನಿಖರ ಕಾರಣ ತಿಳಿದುಬರಬೇಕಿದೆ.

ಮೃತರು ಮಕ್ಕಳಾದ ಸತ್ಯಶ್ರೀ, ಆದಿತ್ಯ ರವರನ್ನುಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here