Home ಕ್ರೀಡಾ ಸಮಾಚಾರ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ

91
0

ನವದೆಹಲಿ: ಭಾರತದ ಫುಟ್‌ಬಾಲ್ ತಂಡದ
ನಾಯಕ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಓರ್ವನೆನಿಸಿಕೊಂಡಿರುವ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್‌ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಪ್ರಕಟಿಸಿದ್ದಾರೆ. ಕಳೆದ ಎರಡು ದಶಕಗಳ ಕಾಲ ಭಾರತೀಯ ಫುಟ್ಬಾಲ್ ಅನ್ನು ಮುನ್ನಡೆಸಿದ ಅವರು ತಮ್ಮ 39ನೆಯ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ತೆರೆ ಎಳೆಯುತ್ತಿದ್ದಾರೆ.

ಸುನೀಲ್ ಅವರು ಮಾರ್ಚ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗುವಾಹಟಿಯಲ್ಲಿ ಭಾರತದ ಪರವಾಗಿ 150ನೇ ಫುಟ್‌ಬಾಲ್ ಪಂದ್ಯವಾಡಿದ್ದರು. ಇದರಲ್ಲಿ 1-2 ಗೋಲುಗಳ ಅಂತರದಲ್ಲಿ ಭಾರತ ಸೋಲು ಕಂಡಿತ್ತು.

2005ರಲ್ಲಿ ಸುನೀಲ್‌ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಲೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರ ಸಕ್ರಿಯ ಆಟಗಾರರಲ್ಲಿ ಗೋಲು ಗಳಿಸಿದವರ ಸುನೀಲ್‌ ಮೂರನೇ ಸ್ಥಾನದಲ್ಲಿದ್ದಾರೆ. ಎಂಬುದು ಇಡೀ ದೇಶಕ್ಕೆ ಹೆಮ್ಮೆ ತರುವ ವಿಚಾರ.


ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ನಲ್ಲಿ ಸಕ್ರಿಯ ಆಟಗಾರರ ಪೈಕಿ ಅತಿ ಹೆಚ್ಚು ಗೋಲು ಗಳಿಸಿದ ಮೂರನೇ ಆಟಗಾರ ಎಂದ ಶ್ರೇಯವನ್ನು ಚೆಟ್ರಿ ಹೊಂದಿದ್ದಾರೆ. ಚೆಟ್ರಿ ಈವರೆಗೆ ಭಾರತಕ್ಕಾಗಿ ಒಟ್ಟು 94 ಗೋಲುಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ತಾರೆ ಕ್ರಿಸ್ಟಿಯಾನೊ ರೊನಾಲ್ಲೊ ಅಗ್ರಸ್ಥಾನದಲ್ಲಿದ್ದು (128 ಗೋಲು, 205 ಪಂದ್ಯ), ಅರ್ಜೇಂಟೀನಾದ ಲಯೊನೆಲ್ ಮೆಸ್ಸಿ (106 ಗೋಲು, 180 ಪಂದ್ಯ) ಎರಡನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಕ್ರಿಸ್ಟಿಯಾನೋ ಸಾಲಿನಲ್ಲಿ ಚೆಟ್ರಿ ನಿಂತಿದ್ದಾರೆ.
ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸುನಿಲ್ ಚೆಟ್ರಿ ತಮ್ಮದಾಗಿಸಿಕೊಂಡಿದ್ದಾರೆ. 2005ರಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಚೆಟ್ರಿ ಫುಟ್‌ಬಾಲ್ ಲೋಕಕ್ಕೆ ಪದಾರ್ಪಣೆ ಮಾಡಿದ ಅವರು ಈವರೆಗೆ 150 ಪಂದ್ಯಗಳನ್ನು ಆಡಿದ್ದಾರೆ. 2008ರ ಎಎಫ್‌ಸಿ ಚಾಲೆಂಜ್‌ ಕಪ್‌ ಫೈನಲ್‌ನಲ್ಲಿ ತಜಕಿಸ್ತಾನದ ವಿರುದ್ಧ ‘ಹ್ಯಾಟ್ರಿಕ್ ಗೋಲು’ಗಳ ಸಾಧನೆ ಮಾಡಿದ್ದರು. ಆ ಮೂಲಕ ಗೆಲುವು ದಾಖಲಿಸಿದ್ದ ಭಾರತ 25 ವರ್ಷಗಳ ಬಳಿಕ ಏಷ್ಯಾ ಕಪ್‌ಗೆ ಅರ್ಹತೆ ಪಡೆದಿತ್ತು.

ಇದಲ್ಲದೆ 2007, 2009 ಹಾಗೂ 2012ರಲ್ಲಿ ನೆಹರೂ ಕಪ್ 2011, 2015, 2021 2023 ಸ್ಯಾಫ್ ಚಾಂಪಿಯನ್‌ಶಿಪ್ ಅನ್ನು ಭಾರತ ಗೆಲ್ಲುವಲ್ಲಿ ಸುನಿಲ್ ಚೆಟ್ರಿ ಮಹತ್ವದ ಪಾತ್ರ ವಹಿಸಿದ್ದರು.
ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯಿಂದ (ಎಐಎಫ್‌ಎಫ್) ಏಳು ಸಲ ‘ವರ್ಷದ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
39 ವರ್ಷದ ಚೆಟ್ರಿ, ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್‌ ವಿರುದ್ಧ ಜೂನ್ 6ರಂದು ಕೋಲ್ಕತ್ತದಲ್ಲಿ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಬೆಂಗಳೂರು ಎಫ್‌ಸಿ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ಅಲ್ಲಿಯು ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ.
ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಚೆಟ್ರಿ ಅವರು ಮಾಡಿರುವ ದಾಖಲೆಗಳು ಬಹುಕಾಲ ಉಳಿಯುವಂತದ್ದಾಗಿದೆ.
ಚೆಟ್ರಿ ಅವರ ಸಾಧನೆಗಳನ್ನು ಗುರುತಿಸಿ
ಅವರಿಗೆ ಸರಕಾರ

  • ಅರ್ಜುನ ಪ್ರಶಸ್ತಿ (2011)

ಪದ್ಮಶ್ರೀ ಪ್ರಶಸ್ತಿ

  • (2019)
  • ಖೇಲ್ ರತ್ನ ಪ್ರಶಸ್ತಿ 2021 ಯನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here