ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.
ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)
ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ.
ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘ (ಸಿಐಟಿಯು) ಜಿಲ್ಲಾ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಯಾವುದೇ ಕಾರಣಕ್ಕೂ ಕಂಪೆನಿ ಬಂದ್ ಮಾಡಲು ಬಿಡುವುದಿಲ್ಲ ಕಂಪೆನಿ ಮುಚ್ಚುವ ಮೂಲಕ ಬೀಡಿ ಕಾರ್ಮಿಕರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ ನಮ್ಮ ಬೇಡಿಕೆ ಈಡೇರುವ ವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು. ಬೀಡಿ ಫೆಡರೇಷನ್ ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯ್ಯದ್ ಮುಜೀಬ್ ತುಮಕೂರು, ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸಿಐಟಿಯು ಮುಖಂಡ ಬಿ.ಎಂ ಭಟ್ ಅವರು ಅನಿರ್ಧಿಷ್ಟ ಮುಷ್ಕರದ ನೇತೃತ್ವ ವಹಿಸಿದ್ದಾರೆ
ಬೀಡಿ ಗುತ್ತಿಗೆದಾರರ ಸಂಘಟನೆಗಳ ಮುಖಂಡರುಗಳು ಹಾಗೂ ಬೀಡಿ ಕಾರ್ಮಿಕ ದಂಘಟನೆಯ ಮುಖಂಡರುಗಳು ಧರಣಿಯಲ್ಲಿ ಬಾಗಿಗಳಾಗುತ್ತಿದ್ದಾರೆ.