Home ಅಪರಾಧ ಲೋಕ ಧರ್ಮಸ್ಥಳ;ಪೊಸೊಳಿಕೆ ಯಲ್ಲಿ ಸ್ಮೋಕ್ ಹೌಸ್  ಬೆಂಕಿಗೆ ಆಹುತಿ ಲಕ್ಷಾಂತರ ನಷ್ಟ

ಧರ್ಮಸ್ಥಳ;ಪೊಸೊಳಿಕೆ ಯಲ್ಲಿ ಸ್ಮೋಕ್ ಹೌಸ್  ಬೆಂಕಿಗೆ ಆಹುತಿ ಲಕ್ಷಾಂತರ ನಷ್ಟ

0
2

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಪೊಸೊಳಿಕೆ ಯಲ್ಲಿ ರಬ್ಬರ್ ಒಣಗಿಸುವ ‘ಸ್ಮೋಕ್ ಹೌಸ್’ ಕಟ್ಟಡಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಇಲ್ಲಿನ ನಿವಾಸಿ ಪಿ‌. ಕೆ ಜೋಬ್ ಎಂಬವರಿಗೆ ಸೇರಿದ ಸ್ಮೋಕ್ ಹೌಸ್ ಬೆಂಕಿಗೆ ಆಹುತಿಯಾಗಿದೆ. ಮನೆಯ ಸಮೀಪವೇ ಎರಡು ಸ್ಮೋಕ್ ಹೌಸ್ ಗಳು ಇದ್ದು ಬೆಂಕಿ‌ ಆಕಸ್ಮಿಕದಲ್ಲಿ ಎರಡೂ ಕಟ್ಟಡಗಳು ಸಂಪೂರ್ಣ ಹಾನಿಗೀಡಾಗಿದೆ. ಒಣಗಲು ಹಾಕಿದ್ದ ರಬ್ಬರ್, ಕಟ್ಟಡದೊಳಗಿದ್ದ ಮರಮಟ್ಟುಗಳು ಪೂರ್ಣ ಸುಟ್ಟು ಹೋಗಿದೆ. ಸುಮಾರು ಐದರಿಂದ ಆರು ಲಕ್ಷ ರೂ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ‌.
ಸೆ.2‌ರಂದು ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಕಟ್ಟಡಗಳು ಪೂರ್ಣ ಬೆಂಕಿಗೆ‌ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.

NO COMMENTS

LEAVE A REPLY

Please enter your comment!
Please enter your name here