Home ಕ್ರೀಡಾ ಸಮಾಚಾರ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಫುಟ್‌ಬಾಲ್ ದಿಗ್ಗಜ ಮೆಸ್ಸಿ

1
0

ಅರ್ಜೆಂಟೀನಾ: ಅರ್ಜೆಂಟೀನಾದ ವಿಶ್ವಕಪ್ ವಿಜೇತ ನಾಯಕ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ತಮ್ಮ ದೇಶಕ್ಕಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಅಪ್ರತಿಮ ಸೇವೆ ಸಲ್ಲಿಸಿದ ‘ಫುಟ್‌ಬಾಲ್ ದಿಗ್ಗಜ’ನ ಅಂತಾರಾಷ್ಟ್ರೀಯ ಪಯಣಕ್ಕೆ ತೆರೆಬಿದ್ದಿದೆ.

ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ತಮ್ಮ ಎರಡು ದಶಕಕ್ಕೂ ಹೆಚ್ಚು ಕಾಲದ ಸುದೀರ್ಘ ಯಾನವನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಮೆಸ್ಸಿ ಅಧಿಕೃತವಾಗಿ ಪ್ರಕಟಿಸಿದ್ದು, ವಿಶ್ವದಾದ್ಯಂತ ಇರುವ ಕೋಟ್ಯಂತರ ಫುಟ್‌ಬಾಲ್ ಅಭಿಮಾನಿಗಳನ್ನು ಈ ನಿರ್ಧಾರ ಭಾವುಕರನ್ನಾಗಿಸಿದೆ. ತಮ್ಮ ನಿವೃತ್ತಿಯ ನಿರ್ಧಾರವನ್ನು ಮೆಸ್ಸಿ ಅವರು ಇನ್ಸಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅರ್ಜೆಂಟೈನಾ ತಂಡಕ್ಕೆ ವಿಶ್ವಕಪ್ ಹಾಗೂ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ಗೆದ್ದುಕೊಟ್ಟ ಮೆಸ್ಸಿ ಜಗತ್ತಿನ ಫುಟ್ಬಾಲ್ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ಆಟಗಾರನೆಂದು ಗುರುತಿಸಲ್ಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here