Home ಅಪರಾಧ ಲೋಕ ಬೆಸ್ಟ್ ಶಾಸಕ ಪ್ರಶಸ್ತಿ: ಶಾಸಕರನ್ನು ಅಭಿನಂದಿಸಿದ ತಾಲೂಕಿನ ಮುಸ್ಲಿಂ ಮುಖಂಡರು

ಬೆಸ್ಟ್ ಶಾಸಕ ಪ್ರಶಸ್ತಿ: ಶಾಸಕರನ್ನು ಅಭಿನಂದಿಸಿದ ತಾಲೂಕಿನ ಮುಸ್ಲಿಂ ಮುಖಂಡರು

1
0

ಬೆಳ್ತಂಗಡಿ; “ಕರ್ನಾಟಕ ಟಿವಿ ಲೀಡರ್ ಅವಾರ್ಡ್ಸ್ 2025” ರಡಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ
“ಉತ್ತಮ ಶಾಸಕ ಪ್ರಶಸ್ತಿ” ಪಡೆದಿರುವ ಶಾಸಕ ಹರೀಶ್ ಪೂಂಜ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ತಾಲೂಕಿನ ಮುಸ್ಲಿಂ ಮುಖಂಡರು ಅವರನ್ನು ರವಿವಾರ ಅವರ ನಿವಾಸದಲ್ಲಿ ಅಭಿನಂದಿಸಿದರು.

ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಮುಸ್ಲಿಂ ಮುಖಂಡ, ಸಿವಿಲ್ ಗುತ್ತಿಗೆದಾರ ಅಶ್ರಫ್ ಲಾಯಿಲ ಅವರ ನೇತೃತ್ವದಲ್ಲಿ ಶಾಸಕರ ಮನೆಗೆ ತೆರಳಿದ ನಿಯೋಗ ಅವರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದರು.

ತಾಲೂಕಿನ ಸಮಗ್ರ ಅಭಿವೃದ್ದಿಯ ಕನಸುಹೊತ್ತು ತನ್ನ ಪಾಲಿನ ಅನುದಾನದಲ್ಲಿ ತಾರತಮ್ಯವೆಸಗದೆ ಹಂಚಿಕೆ ಮಾಡಿದ್ದಾರೆ. ಇತಿಹಾಸ ಪ್ರಸಿದ್ಧ ಕಾಜೂರು ಕ್ಷೇತ್ರಕ್ಕೆ 1.5 ಕೋಟಿ ರೂ. ಅನುದಾನ, ಮುಂಡಾಜೆ ಮಸ್ಜಿದ್, ಲಾಯಿಲ ಗ್ರಾಮದ ಕಕ್ಕ್ಯೇನ ಮಸ್ಜಿದ್ ಸಹಿತ ಅನೇಕ ಮಸ್ಜಿದ್ ಮತ್ತು ಮದರಸಗಳಿಗೆ ಸರಕಾರದಿಂದ ಹಾಗೂ ತನ್ನ ಸ್ವಂತ ನಿಧಿಯಿಂದ ಅನುದಾನ ಒದಗಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದು ಮುಖಂಡರುಗಳು ಶಾಸಕರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here