ಬೆಳ್ತಂಗಡಿ: ಜಾಗಕ್ಕೆ ಹೋಗಲು ದಾರಿ ಹಕ್ಕಿಗಾಗಿ ಆಗ್ರಹಿಸಿ ನಿಡ್ಲೆ ಗ್ರಾಮದ
ಹರಿಪ್ರಸಾದ್ ಇರ್ವತ್ರಾಯ ಅವರು ಆ.27ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ನಿಡ್ಲೆ ಗ್ರಾಮದಲ್ಲಿ 3 ಎಕರೆ ಜಮೀನಿದ್ದು, 1993 ರಿಂದ ಈ ಜಮೀನಿಗೆ ದಾರಿಯ ಹಕ್ಕು ಊರ್ಜಿತವಾಗಿದೆ ಹೀಗುರುವಾಗಲೇ ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡುವಾಗ ಊರ್ಜಿತದಲ್ಲಿದ್ದ ದಾರಿಯನ್ನು ತೋರಿಸದೆ ಭೂ ಮಂಜೂರಾತಿ ಮಾಡಿದ್ದು 1993ರಿಂದಲೂ ಇದ್ದ ರಸ್ತೆಯನ್ನು 2021ರಲ್ಲಿ ಭೂಪರಿವರ್ತನೆ ಮಾಡುವಾಗ ತಹಶೀಲ್ದಾರರು ರದ್ದು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಒಂದು ವರ್ಷದಿಂದ ಜಮೀಮಿಗೆ ಹೋಗುವ ರಸ್ತೆಗಾಗಿ ಕಚೇರಿಗೆ ಅಲೆದಾಡಿ ಕಾಲು ಸವೆದು ಹೋಗಿದೆಯೇ ಹೊರತು ಸಮಸ್ಯೆ ಪರಿಹಾರವಾಗಿಲ್ಲ ತಮ್ಮ ಸಮಸ್ಯೆಗೆ ಪರಿಹಾರಕ್ಕಾಗಿ ಅವರು ಧರಣಿ ಆರಂಭಿಸಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ವರೆಗೆ ಧರಣಿ ನಡೆಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.




