Home ಸ್ಥಳೀಯ ಸಮಾಚಾರ ಮೀಸಲಾತಿ ಪಾಲಿಸದೆ ನೇಮಕಾತಿ; ಪಡಂಗಡಿ ಕೃಷಿ ಪತ್ತಿನ‌ಸಹಕಾರ ಸಂಘದ 4 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ

ಮೀಸಲಾತಿ ಪಾಲಿಸದೆ ನೇಮಕಾತಿ; ಪಡಂಗಡಿ ಕೃಷಿ ಪತ್ತಿನ‌ಸಹಕಾರ ಸಂಘದ 4 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ

2
0

ಬೆಳ್ತಂಗಡಿ; ಪಡಂಗಡಿ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೇರ ನೇಮಕಾತಿಯ ಮೂಲಕವಾಗಿ ನಾಲ್ಕು ಹುದ್ದೆಗಳನ್ನು ತುಂಬಲು‌ಹೊರಡಿಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮೀಸಲಾತಿಯ ಬಗೆಗಿನ ಆದೇಶಗಳು ಪಾಲನೆಯಾಗದ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಪುತ್ತೂರು ಸಹಕಾರ‌ಸಂಘಗಳ ಸಹಾಯಕ ನಿಬಂಧಕರು ಸೂಚನೆ ನೀಡಿದ್ದಾರೆ.
ಪಡಂಗಡಿ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಮಾರಾಟ ಗುಮಾಸ್ತ ಹುದ್ದೆ ಹಾಗೂ ಕಿರಿಯ ಗುಮಸ್ತ ಮೂರು‌ಹುದ್ದೆಗಳ ನೇಮಕಾತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈ‌ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದರು. ಬೆಳ್ತಂಗಡಿ ತಹಶೀಲ್ದಾರರ ನೇತೃತ್ವದಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರುಗಳ ಸಮಾಲೋಚನಾ ಸಭೆಯಲ್ಲಿ ಈ‌ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸರಕಾರದ ಆದೇಶಗಳ ಪಾಲನೆಯಾಗಿಲ್ಲ ಯಾವುದೇ ಹುದ್ದೆಯನ್ನು ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿರಿಸಲಾಗಿಲ್ಲ ಎಂದು ಮಾಜಿ ಜಿ‌.ಪಂ ಸದಸ್ಯ ಶೇಖರ ಕುಕ್ಕೇಡಿ ಅವರು ಗಮನ ಸೆಳೆದಿದ್ದು ಈ‌ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ‌ ಲಿತ ಮುಖಂಡರುಗಳು ನೇಮಕಾತಿ ಪ್ರಕ್ರಿಯೆಯನ್ನು‌ ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಹಾಗೂ ಮೀಸಲಾತಿಯನ್ನು ಸಮರ್ಪಕವಾಗಿ ಪಾಲಿಸಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಆದ್ದರಂತೆ ಇದೀಗ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯುತ್ತಿರುವ ನಾಲ್ಕು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಪುತ್ತೂರು ಸಹಕಾರ ಸಂಘಗಳ ಸಹಾಯಕ‌ನಿಬಂಧಕರು‌ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here