
ಬೆಳ್ತಂಗಡಿ: ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಅತ್ಯುತ್ತಮ ಶಾಸಕರಾಗಿ ಖಾಸಗಿ ವಾಹಿನಿ ಕರ್ನಾಟಕ ಟಿವಿ ವತಿಯಿಂದ ಇತ್ತೀಚೆಗೆ ನೀಡಲಾದ “ಬೆಸ್ಟ್ ಎಂ.ಎಲ್.ಎ” ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ, ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಣ ಕ್ಷೇತ್ರ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ನೀಡುತ್ತಿರುವ ಕೊಡುಗೆ ಹಾಗೂ ಜನಪರ ಕಾರ್ಯಗಳನ್ನು ಗುರುತಿಸಿ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದು, ಶಾಸಕ ಹರೀಶ್ ಪೂಂಜ ಅವರಿಗೆ ಶುಭ ಹಾರೈಸಿದರು.










