
ಬೆಳ್ತಂಗಡಿ; ಲಾಯಿಲ ಗ್ರಾಮದ ಮುಂಡೇಲು ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನದಿ ನೀರು ನುಗ್ಗಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಮೂರು ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಳಗೆ ಮೂರು ಫೀಟ್ ಗಿಂತ ಮೇಲೆ ನೀರು ಬಂದಿದೆ. ಇಲ್ಲಿನ ಮೂರು ಮನೆಯವರನ್ನು ತಾತ್ಕಾಲಿಕವಾಗಿ ಈ ಮನೆಗಳಿಂದ ಸ್ಥಳಾಂತರ ಮಾಡಲಾಗಿದೆ ಏಕಾ ಏಕಿ ಕೆಸರು ನೀರು ನುಗ್ಗಿದ ಕಾರಣ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ.










