Home ಸ್ಥಳೀಯ ಸಮಾಚಾರ ಕೊಯ್ಯೂರು ಸಂಜೀವ ಮಲೆಕುಡಿಯ ಅವರಿಗೆ ಬೆಸ್ಟ್ ಫೌಂಡೇಶನ್‌ ವತಿಯಿಂದವೀಲ್‌ಚೇರ್ ಹಸ್ತಾಂತರ

ಕೊಯ್ಯೂರು ಸಂಜೀವ ಮಲೆಕುಡಿಯ ಅವರಿಗೆ ಬೆಸ್ಟ್ ಫೌಂಡೇಶನ್‌ ವತಿಯಿಂದವೀಲ್‌ಚೇರ್ ಹಸ್ತಾಂತರ

1
0

ಬೆಳ್ತಂಗಡಿ:ಬೆಸ್ಟ್ ಫೌಂಡೇಶನ್ ವತಿಯಿಂದ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಮಲೆಕುಡಿಯ ಅವರಿಗೆ ವೀಲ್‌ಚೇರ್ ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ವೀಲ್‌ಚೇರ್ ಅನ್ನು ಹಸ್ತಾಂತರಿಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ ಸೇವಾ ಕಾರ್ಯಗಳನ್ನು ಬೆಸ್ಟ್ ಫೌಂಡೇಶನ್ ಮುಂದುವರಿಸಿಕೊಂಡು ಹೋಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಗೌಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನವೀನ್ ಗೌಡ ಸಮಾಜಸೇವಕ ಮಹಮ್ಮದ್ ಸಿದ್ದಿಕ್ ಮಲೆಬೆಟ್ಟು ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here