Home ರಾಜಕೀಯ ಸಮಾಚಾರ ಜಂತರ್ ಮಂತರ್‌ನಲ್ಲಿ ನೀಟ್‌ ಪ್ರತಿಭಟನಾ ಕಾರರ ಮೇಲಿನ ಹಲ್ಲೆ  ಪ್ರಜಾಪ್ರಭುತ್ವ ಹಾಗು ಸಂವಿದಾನದ ಮೇಲೆ ದಾಳಿ;...

ಜಂತರ್ ಮಂತರ್‌ನಲ್ಲಿ ನೀಟ್‌ ಪ್ರತಿಭಟನಾ ಕಾರರ ಮೇಲಿನ ಹಲ್ಲೆ  ಪ್ರಜಾಪ್ರಭುತ್ವ ಹಾಗು ಸಂವಿದಾನದ ಮೇಲೆ ದಾಳಿ; ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವೂರು

4
0

ನವದೆಹಲಿ ಜಂತರ್ ಮಂತರ್‌ನಲ್ಲಿ ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ನಡೆದ ಹಲ್ಲೆಯನ್ನು  ಯುವ ಕಾಂಗ್ರೆಸ್  ಬೆಳ್ತಂಗಡಿ (ಗ್ರಾಮೀಣ ) ಅಧ್ಯಕ್ಷ  ಅಝರ್ ನಾವೂರು ತೀವ್ರವಾಗಿ ಖಂಡಿಸಿದ್ದಾರೆ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದ್ದು, ಈ ಘಟನೆಗೆ ಕೇಂದ್ರ ಸರ್ಕಾರ ನೈತಿಕ ಹೊಣೆ ಹೊತ್ತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಬಲಪ್ರಯೋಗದಿಂದ ಹತ್ತಿಕ್ಕುವ ಯಾವುದೇ ಪ್ರಯತ್ನ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಹಾಗೂ ವಿವಿಧ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ಕುರಿತು ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಸಿ, ಹಲ್ಲೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಝರ್ ನಾವೂರು ಅಧ್ಯಕ್ಷರು ಯುವ ಕಾಂಗ್ರೆಸ್ ಬೆಳ್ತಂಗಡಿ (ಗ್ರಾಮೀಣ ) ಒತ್ತಾಯಿಸದ್ದಾರೆ.

LEAVE A REPLY

Please enter your comment!
Please enter your name here