Home ಸ್ಥಳೀಯ ಸಮಾಚಾರ ದಿಡುಪೆ- ಸಂಸೆ ರಸ್ತೆಯಲ್ಲಿ ಅನಧಿಕೃತ ಸಂಚಾರ: ದಂಡದ ರುಚಿ ತೋರಿಸಿದ ಅರಣ್ಯ ಇಲಾಖೆ

ದಿಡುಪೆ- ಸಂಸೆ ರಸ್ತೆಯಲ್ಲಿ ಅನಧಿಕೃತ ಸಂಚಾರ: ದಂಡದ ರುಚಿ ತೋರಿಸಿದ ಅರಣ್ಯ ಇಲಾಖೆ

0
2

ಬೆಳ್ತಂಗಡಿ; ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸರಹದದ್ದಿನಲ್ಲಿರುವ ಕುದುರೇಮುಖ‌ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ದಿಡುಪೆ-ಸಂಸೆ ರಸ್ತೆಯಲ್ಲಿ ಅನಧಿಕೃತವಾಗಿ ಸಂಚರಿಸಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟವರ ವಿರುದ್ಧ ಅರಣ್ಯ ಇಲಾಖೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಿದೆ.
ದಿಡುಪೆ- ಸಂಸೆ ರಸ್ತೆಯಲ್ಲಿ ವನ್ಯಜೀವಿಗಳ ಓಡಾಟ, ಅಪಾಯಕಾರಿ ತೊರೆ, ಹಳ್ಳಗಳು ಇವೆ. ಅಲ್ಲದೆ ಮಳೆಗಾಲದಲ್ಲಿ ಈ ರಸ್ತೆ ಅತ್ಯಂತ ದುರ್ಗಮ ಹಾಗೂ ಅಪಾಯಕಾರಿಯಾಗಿದೆ .ಈ ಕಾರಣದಿಂದ ಇಲ್ಲಿನ ಸ್ಥಳೀಯ ಜನರಿಗೆ ಮಾತ್ರ ಪ್ರಸ್ತುತ ಸಂಚಾರಕ್ಕೆ ಅವಕಾಶವಿದೆ‌. ಪ್ರವಾಸಿಗರಿಗೆ ಈ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಈ ಬಗ್ಗೆ ದಿಡುಪೆಯಲ್ಲಿ ಇಲಾಖೆ ವತಿಯಿಂದ ಗೇಟು ಅಳವಡಿಸಿ ಸೂಚನಾ ಫಲಕವನ್ನು ಹಾಕಲಾಗಿದೆ.
ಈ ಸೂಚನೆಗಳನ್ನು ಪಾಲಿಸದೆ ಅನಧಿಕೃತವಾಗಿ ಗೇಟು ತೆರೆದು ಹಲವಾರು ತಂಡಗಳು ಈ ರಸ್ತೆ ಮೂಲಕ ಸಂಚರಿಸಿದ್ದಲ್ಲದೆ ವಿಡಿಯೋ ಹಾಗೂ ಫೋಟೋಗಳನ್ನು ಇನ್ಸ್ಟಾಗ್ರಾಮ್, ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಇದೀಗ ಇಲಾಖೆಯು ಇಂತವರ ವಿರುದ್ಧ ಕ್ರಮ ಕೈಗೊಂಡಿದ್ದು ಸುಮಾರು ಆರು ತಂಡಗಳಿಗೆ ನೋಟಿಸು ನೀಡಿ ದಂಡವನ್ನು ವಿಧಿಸಿದೆ.
ಸ್ಥಳೀಯರನ್ನು ಹೊರತುಪಡಿಸಿ ಈ ರಸ್ತೆಯಲ್ಲಿ ಇತರರಿಗೆ ಸಂಚರಿಸಲು ಅವಕಾಶ ಇರುವುದಿಲ್ಲ. ಅನಧಿಕೃತವಾಗಿ ಸಂಚರಿಸುವವರ ವಿರುದ್ಧ ಇಲಾಖೆ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಟಾ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here