
ಬೆಳ್ತಂಗಡಿ: CET ಮತ್ತು JEE ಫಲಿತಾಂಶದಲ್ಲಿ ರಾಜ್ಯಕ್ಕೆ 7 ನೇ Rank ತಂದು ಗಮನ ಸೆಳೆದಿದ್ದ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು, ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NTA ಗುರುವಾರ NEET UG ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗೆ ನಡೆದ ಪರೀಕ್ಷೆಯಲ್ಲೂ ಉತ್ತಮಸಾಧನೆ ಮಾಡಿದೆ.
ಪ್ರಪ್ರಥಮ ಬಾರಿಗೆ ಕಾಲೇಜಿನಿಂದ 3 ವಿದ್ಯಾರ್ಥಿಗಳು AIIMS ಗೆ ಅರ್ಹತೆ ಪಡೆಯಲು ಬೇಕಾದ ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ವಿದ್ವತ್ ಪಿಯು ಕಾಲೇಜಿನ ಸಂಪತ್ ಕುಮಾರ್ ಪುಟ್ಟಿ ರಾಷ್ಟ್ರಮಟ್ಟದಲ್ಲಿ 1059 Rank ನೊಂದಿಗೆ 99.8531423 ಪರ್ಸೆಂಟೈಲ್ ಗಳಿಸಿದ್ದು, 635 ಅಂಕದೊಂದಿಗೆ ಪ್ರಥಮ ಪ್ರಯತ್ನದಲ್ಲೇ ಪ್ರತಿಷ್ಠಿತ AIIMS ಪ್ರವೇಶಾತಿಗೆ ಅಹರ್ತೆ ಗಳಿಸಲು ಬೇಕಾದ ಅಂಕವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇನ್ನುಳಿದಂತೆ ಪ್ರತೀಕ್ ವಿ.ಎಸ್. ರಾಷ್ಟ್ರಮಟ್ಟದಲ್ಲಿ 1264 ರ್ಯಾಂಕ್ ಹಾಗೂ 99.4261699 ಪರ್ಸೆಂಟೈಲ್ ಹಾಗೂ 596 ಅಂಕ ದಾಖಲಿಸಿದ್ದಾರೆ. ತನುಶ್ರೀ ರಾಷ್ಟ್ರಮಟ್ಟದಲ್ಲಿ 1865 Rank ಸಂಪಾದಿಸಿ 99.1593559 ಪರ್ಸೆಂಟೈಲ್ ಹಾಗೂ 583 ಅಂಕ ಪಡೆದಿದಿದ್ದಾರೆ. ಮನೀಶ್ ಡಿ. 554 ಅಂಕಗಳನ್ನು ಪಡೆದು, 98.2710592 ಪರ್ಸೆಂಟೈಲ್ ಗಳಿಸಿದ್ದಾರೆ. ಸೃಷ್ಟಿ ಎಸ್. ರಾಷ್ಟ್ರಮಟ್ಟದಲ್ಲಿ 1199 Rank ದಾಖಲಿಸಿದ್ದಾರೆ.
ಕೇವಲ 32 NEET ಆಕಾಂಕ್ಷಿಗಳನ್ನು ಹೊಂದಿದ್ದ ವಿದ್ವತ್ ತನ್ನ ಚೊಚ್ಚಲ ಪ್ರಯತ್ನದಲ್ಲೇ ಗಮನಾರ್ಹ ಸಾಧನೆ ತೋರಿದೆ. ಒಟ್ಟು8 ವಿದ್ಯಾರ್ಥಿಗಳು 500 ರಿಂದ ಅಧಿಕ ಅಂಕಗಳನ್ನು ಪಡೆಯುವುದರೊಂದಿಗೆ ಪ್ರಥಮ ಪ್ರಯತ್ನದಲ್ಲೇ ಶಿಕ್ಷಣ ಪ್ರೇಮಿಗಳು ಗಮನ ಸೆಳೆಯುವಂತೆ ಮಾಡಿದ್ದಾರೆ.
CET ಸಾಧನೆಯಲ್ಲೂ ಮುಂಚೂಣಿ:
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ UG CET ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಒಟ್ಟು (98.61111111) ನೊಂದಿಗೆ ರಾಜ್ಯಕ್ಕೆ 7ನೇ Rank ಪಡೆದು ಬೆಳ್ತಂಗಡಿ ತಾಲೂಕನ್ನು ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ್ದರು. ನೀಟ್ ಸಾಧಕ ಸಂಪತ್ ಕುಮಾರ್ ಪುಟ್ಟಿ ಅವರು ಈ ಹಿಂದೆ ಯುಜಿ ಸಿಇಟಿ ಪರೀಕ್ಷೆಯಲ್ಲಿ ನ್ಯಾಚುರೋಪತಿಕ್ ಮತ್ತು ಯೋಗಿಕ್ ಸೈನ್ಸ್ ನಲ್ಲಿ 105 Rank ಪಡೆದಿದ್ದು, ಬಿ.ಎಸ್.ಸಿ. ಎ.ಜಿ. ಹಾಗೂ ಫುಡ್ ಮತ್ತು ಸೈನ್ಸ್ ನಲ್ಲಿ 123 Rank ಗಳಿಸಿದ್ದರು. ವೆಟರ್ನರಿ ಸೈನ್ಸ್ ನಲ್ಲಿ 154 Rank, ಇಂಜಿನಿಯರಿಂಗ್ ವಿಭಾಗದಲ್ಲಿ 654 Rank ಹಾಗೂ ಬಿ.ಫಾರ್ಮದಲ್ಲಿ 179 ನೇ Rank ಗಳಿಸುವ ಮೂಲಕ ಅಮೋಘ ಸಾಧನೆ ತೋರಿದ್ದರು.
ತನುಶ್ರೀ ಅವರು ಬಿ.ಎಸ್.ಸಿ. ಎಜಿ. ಯಲ್ಲಿ 194 ನೇ Rank, ಫುಡ್ ಸೈನ್ಸ್ ವಿಭಾಗದಲ್ಲಿ 194 Rank ಹಾಗೂ ವೆಟರ್ನರಿ ಸೈನ್ಸ್ ನಲ್ಲಿ 401 Rank ಪಡೆದಿದ್ದಾರೆ. ಈಕೆಯೂ ಪಿಯು ಬೋರ್ಡ್ ಪರೀಕ್ಷೆಯಲ್ಲಿ 593 ಅಂಕದೊಂದಿಗೆ ರಾಜ್ಯಕ್ಕೆ 7 ನೇ ಸ್ಥಾನಿಯಾಗಿದ್ದರು. ಪ್ರಸಕ್ತ ನೀಟ್ ಪರೀಕ್ಷೆಯಲ್ಲೂ ಗಮನಾರ್ಹ ಸಾಧನೆ ಮಾಡಿರುವುದು ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ಕೈಗನ್ನಡಿಯಾಗಿದೆ.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವೈಶಿಷ್ಟ್ಯ ಹೊಂದಿರುವ ಕಾಲೇಜಾಗಿರುವುದು ಈ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಸ್ಪರ್ಧಾತ್ಮಕ ತರಬೇತಿಗಾಗಿ ಸಾಧಕ ಸ್ನೇಹಿ ಮಾಡೆಲ್ ಪದ್ಧತಿಯನ್ನು ನಮ್ಮ ಕಾಲೇಜು ಅನುಸರಿಸರಿಸುತ್ತಿದ್ದು, ಖ್ಯಾತ ವಿಷಯ ತಜ್ಞರುಗಳನ್ನೊಳಗೊಂಡ ವಿಶೇಷ ತಂಡ ತರಬೇತಿ ನೀಡುತ್ತಿರುವುದೇ ಫಲಿತಾಂಶಕ್ಕೆ ಸಾಕ್ಷಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ವಿದ್ವತ್ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಕಾಶಿನಾಥ್ ಎಂ.ಕೆ., ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಇ.ಎಂ., ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್, ಉಪನ್ಯಾಸಕ ವರ್ಗ ಪ್ರಶಂಸಿದ್ದಾರೆ.

