
ಬೆಳ್ತಂಗಡಿ; ಉಜಿರೆ ಬಸ್ ನಿಲ್ದಾಣದ ಸಮೀಪದ ಶೌಚಾಲಯದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಜು 16 ರಂದು ಪತ್ತೆಯಾಗಿದೆ.
ಸುಮಾರು 50 ರಿಂದ 55 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಇದಾಗಿದ್ದು ಅನಾರೋಗ್ಯ ಅಥವಾ ಇನ್ಯಾವುದೋ ಕಾರಣದಿಂದ ಈ ವ್ಯಕ್ತಿ ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ




