

ಬೆಳ್ತಂಗಡಿ; ಅಕ್ಷರ ದಾಸೋಹ ನೌಕರರಿಗೆ ಕಳೆದ 15 ವರ್ಷಗಳಿಂದ ಕೇಂದ್ರ ಸರಕಾರ ಒಂದು ರೂಪಾಯಿ ಸಂಬಳ ಏರಿಸದೇ ಮಹಿಳಾ ಕಾರ್ಮಿಕರಿಗ ದ್ರೋಹ ಎಸಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಹೇಳಿದರು.
ಅವರು ಇಂದು ಅಕ್ಷರದಾಸೋಹ ನೌಕರರು ಭಾರತ ದೇಶದಾದತ ನಡೆಸುತ್ತಿರುವ ಕರಾಳ ದಿನದ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ನೀಡಿ ಮಾತಾಡುತ್ತಿದ್ದರು. ಕನಿಷ್ಟ ನ್ಯಾಯಯುತ ವೇತನ, ಸವಲತ್ತುಗಳನ್ನು ಕೊಡಲಾಗದ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಈ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ರಾಮ ಮಂದಿರದಲ್ಲಿ ಕೊಟ್ಯಾಂತರ ಹಣ ಲೂಟಿ ಮಾಡುವುದನ್ನು ತಡೆಯಲಾಗದ ಕೇಂದ್ರ ಸರಕಾರಕ್ಕೆ ಬಡವರ ಬದುಕಿನ ಬಗ್ಗೆಯೂ ಚಿಂತೆ ಇಲ್ಲೆಂಬುದು ಅರಿವಾಗುತ್ತದೆ ಎಂದರು. ಬೀಡಿ ಕಾರ್ಮಿಕರ ವೇತನ ಕಡಿತ ಮಾಡಿದ ರಾಜ್ಯ ಸರಕಾರಕ್ಕೂ ಮಹಿಳಾ ಕಾರ್ಮಿಕರ ಮೇಲೆ ಕಾಳಜಿ ಇಲ್ಲ ಎಂದರು.
ವೇತನ ಹೆಚ್ಚಳ, 12 ತಿಂಗಳ ಸಂಬಳ, ಅರ್ದದಲ್ಲಿ ಕೆಲಸದಿಂದ ತೆಗೆಯದಂತೆ ತಡೆ, ಕನಿಷ್ಟ 2 ಅಡುಗೆಯವರ ಅಗತ್ಯತೆ ಸೇರಿದಂತೆ 20 ಬೇಡಿಕೆಗಳ ಆಗ್ರಹ ಪತ್ರವನ್ನು ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಅವರ ಮೂಲಕ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ನೀಡಲಾಯಿತು. ಅಕ್ಷರದಾಸೋಹ ನೌಕರರಸಂಘದ ತಾಲೂಕು ಅಧ್ಯಕ್ಷರಾದ ಸುನೀತ, ಕಾರ್ಯದರ್ಶಿ ವಿನೋದ,ಖಜಾಂಜಿ ಮೀನಾಕ್ಷಿ ಮುಖಂಡರುಗಳಾದ ಲಲಿತ ಕುವೆಟ್ಟು, ಸುಂದರಿ ನಿಡ್ಲೆ, ಸಿಐಟಿಯು ಮುಖಂಡರಾದ ಜಯಶ್ರೀ, ಅಶ್ವಿತ, ಮಹಿಳಾಸಂಘದ ಕಿರಣಪ್ರಭಾ, ಕುಮಾರಿ, ಅಪ್ಪಿ, ಡಿವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ಉಪಸ್ತಿತರಿದ್ದರು.



