Home ಅಪರಾಧ ಲೋಕ 41 ಬಾರಿ ದಸ್ತಗಿರಿ ವಾರೆಂಟ್ ಅದೇಶವಾಗಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು

41 ಬಾರಿ ದಸ್ತಗಿರಿ ವಾರೆಂಟ್ ಅದೇಶವಾಗಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು

0
6

ಬೆಳ್ತಂಗಡಿ: ಪುತ್ತೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ಬಳಿಕ‌ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು 41 ಬಾರಿ ದಸ್ತಗಿರಿ ವಾರೆಂಟ್ ಅದೇಶವಾಗಿದ್ದ ಆರೋಪಿಯನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೇರಳ ತ್ರಿಶೂ‌ರ್ ನಿವಾಸಿ ನೆಲ್ಸನ್ ಸಿ.ವಿ (38) ಎಂಬಾತನಾಗಿದ್ದಾನೆ.

ಪ್ರಕರಣದ ಹಿನ್ನಲೆ;
ದಿನಾಂಕ 22.12.2017 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮೂರು ಜನ ಅಪರಿಚಿತ ವ್ಯಕ್ತಿಗಳು ನುಗ್ಗಿ ಮನೆಯಲ್ಲಿದ್ದವರಿಗೆ ಪಿಸ್ತೂಲ್ ಮತ್ತು ಚೂರಿಯನ್ನು ತೋರಿಸಿ ಸುಮಾರು ರೂ 2,88,000/- ಅಂದಾಜು ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ರೂ 60,0000/- ನಗದು ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ 200/2017 ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಲ್ಲಿ ಆರೋಪಿಯಾದ ಕೇರಳ ತ್ರಿಶೂ‌ರ್ ನಿವಾಸಿ ನೆಲ್ಸನ್ ಸಿ.ವಿ (38) ಎಂಬಾತನು, ದಿನಾಂಕ 27-08-2021 ರಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ಈವರೆಗೆ ಒಟ್ಟು 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿದ್ದರೂ ತಲೆಮರೆಸಿಕೊಂಡು ತಿರುಗಾಡುತ್ತಿದ್ದ.
ಸದ್ರಿ ಆರೋಪಿಯನ್ನು ಜು‌8 ರಂದು ರಂದು ಪುತ್ತೂರು ನಗರ ಪೊಲೀಸ್ ಠಾಣಾ ಠಾಣಾ ಹೆಚ್.ಸಿ 413 ಸಂತೋಷ್‌ ಎ, ಪಿಸಿ 2347 ವಿನಾಯಕ, ಮತ್ತು ಪಿಸಿ 454 ಶಿವರಾಜ್‌ ರವರುಗಳು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಮಿಯೂರು ಎಂಬಲ್ಲಿ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಸದ್ರಿ ಆರೋಪಿಯು ಮಾನ್ಯ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು ಮುಚ್ಚಳಿಕೆಯನ್ನು ಪಡೆದುಕೊಂಡು ಆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ನ್ಯಾಯಾಲಯದ ಷರತ್ತಿನ ಆದೇಶವನ್ನು ಪದೇ ಪದೇ ಉಲ್ಲಂಘಿಸಿರುವುದರಿಂದ ಈತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: 80/2026 ಕಲಂ: 269 NS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

NO COMMENTS

LEAVE A REPLY

Please enter your comment!
Please enter your name here