Home ಸ್ಥಳೀಯ ಸಮಾಚಾರ ಪುತ್ತೂರಿನ ಜಿಮ್ ಟ್ರೈನರ್ ಮಡಂತ್ಯಾರು ಮೂಲದ ಸಚಿನ್‌ರೈ ಕುಸಿದು ಬಿದ್ದು ಸಾವು

ಪುತ್ತೂರಿನ ಜಿಮ್ ಟ್ರೈನರ್ ಮಡಂತ್ಯಾರು ಮೂಲದ ಸಚಿನ್‌ರೈ ಕುಸಿದು ಬಿದ್ದು ಸಾವು

0
1

ಪುತ್ತೂರು: ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಸಚಿನ್ ರೈ ಇಂದು ಮುಂಜಾನೆ ಆಕಸ್ಮಿಕವಾಗಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಮಡಂತ್ಯಾರು ನಿವಾಸಿಯಾಗಿದ್ದ ಇವರು ಪ್ರಸ್ತುತ ಪುತ್ತೂರಿನ ಕಲ್ಲಿಮಾರ್‌ನಲ್ಲಿ ವಾಸವಿದ್ದರು.

ಇಂದು ಮುಂಜಾನೆ ಸಚಿನ್ ರೈ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

NO COMMENTS

LEAVE A REPLY

Please enter your comment!
Please enter your name here