ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗದ ಮತ್ತು ನೂತನ ಸಿ.ಟಿ.ಸ್ಕ್ಯಾನಿಂಗ್ ಪ್ರಾರಂಭೋತ್ಸವ ಎ.30ರಂದು ನಡೆಯಿತು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಬಲ್ಮಟ ಸಿಟಿ ಸ್ಕ್ಯಾನಿಂಗ್ ಸಂಸ್ಥೆಯ ಡಾ.ಅತಿಂದ್ರ ಮಂಗಳೂರು, ಡಾ.ಗೋಪಾಲಕೃಷ್ಣರವರ ತಂದೆ ಸೀತಾರಾಮ ಭಟ್, ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಪ್ರಸ್ತಾವನೆಗೈದರು, ಡಾ.ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೈದ್ಯರುಗಳು, ವಿವಿಧ ಸಂಘ ಸಂಸ್ಥೆಗಳು ಪ್ರಮುಖರು, ಸಿಬ್ಬಂದಿ ಗಳು ಹಾಗೂ ಇತರರು ಉಪಸ್ಥಿತರಿದ್ದರು.
ಪಿ.ಆರ್.ಒ ಎಸ್.ಜಿ ಭಟ್ ಸ್ವಾಗತಿಸಿದರು.