ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದಲ್ಲಿ ಸುಧೀರ್ಘ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಶ್ರೀ ರಾಜು ಶೆಟ್ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಜೂ. 30ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು.
ಅವರು ಜೂ. 24ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ರಾಜು ಶೆಟ್ಟಿ ಇವರು ತಾ. 24.06.1989ರಂದು ಸಂಘದಲ್ಲಿ ಸೇವೆಗೆ ನೇಮಕ ಹೊಂದಿ ದಿನಾಂಕ .01.02.1995ರಿಂದ ಇಲ್ಲಿಯವರೆಗೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸುಧೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಸದ್ರಿಯವರ ಸೇವಾವಧಿಯಲ್ಲಿ ಸಂಘದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.1994-95ನೇ ಸಾಲಿನಲ್ಲಿ ಸಂಘದ ಮುಖ್ಯಕಛೇರಿಗೆ ಸ್ವಂತ ಕಟ್ಟಡ ಸ್ಥಾಪನೆ,1998-99ನೇ ಸಾಲಿನಲ್ಲಿ ಲಾಯಿಲದ ಕೊಯ್ಯರು ಕ್ರಾಸ್ ಬಳಿ ರಬ್ಬರ್ ಮೌಲೆಡ್ ವಸ್ತುಗಳ ತಯಾರಿಕಾ ಘಟಕ ಸ್ಥಾಪನೆ, 2006-07ನೇ ಸಾಲಿನಲ್ಲಿ ಸುಸಜ್ಜಿತ ನರ್ಸರಿ ಸ್ಥಾಪನೆ, 2012-13ನೇ ಸಾಲಿನಲ್ಲಿ ಸದಸ್ಯರ ಅನುಕೂಲಕ್ಕಾಗಿ ಲಾಯಿಲದಲ್ಲಿ ಸುಸಜ್ಜಿತ ಗೋದಾಮು ನಿರ್ಮಾಣ, 2021-22ನೇ ಸಾಲಿನಲ್ಲಿ ಗುರುವಾಯನಕೆರೆ ಶಾಖೆಗೆ ಸ್ವಂತ ಕಟ್ಟಡ ಸ್ಥಾಪನೆ,2022-23ನೇ ಸಾಲಿನಲ್ಲಿ ಮುಂಡಾಜೆಯಲ್ಲಿ ಸಂಘಕ್ಕೆ ನಿವೇಶನ ಖರೀದಿ,2022-23ನೇ ಸಾಲಿನಲ್ಲಿ ಲ್ಯಾಟೆಕ್ಸ್ ಖರೀದಿ ಪ್ರಾರಂಭ.ಸಂಘಕ್ಕೆ 5 ಜಿಲ್ಲೆಗಳಲ್ಲಿ 33 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿರುವುದು. ಸಂಘದ 9 ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್ಲೈನ್ ವ್ಯವಸ್ಥೆಗೆ ಒಳಪಡಿಸಿದ್ದು,ಸದಸ್ಯರ ಅನುಕೂಲಕ್ಕಾಗಿ ಲಾಯಿಲದಲ್ಲಿ ವೇಬ್ರಿಡ್ಜ್ ನಿರ್ಮಾಣ, ಸಂಘಕ್ಕೆ 2 ಸಾಗಾಟದ ವಾಹನಗಳ ಖರೀದಿ.,ಸಂಘಕ್ಕೆ ನಿರಂತರವಾಗಿ ರಬ್ಬರು ಒದಗಿಸುವ ಸದಸ್ಯರಿಗೆ ರಿಯಾಯಿತಿ ದರದಲ್ಲಿ ರಬ್ಬರು ಕೃಷಿ ಉಪಯುಕ್ತ ವಸ್ತುಗಳನ್ನು ಒದಗಿಸುವ ವ್ಯವಸ್ಥೆ ಪ್ರಾರಂಭಿಸಿದ್ದು ಮೊದಲಾದ ಸಾಧನೆಯನ್ನು ಮಾಡಿ ಸಂಘದ ಬೆಳವಣಿಗೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.ಜೂ. 30 ರಂದು ಬೆಳಿಗ್ಗೆ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು ಬಳಿಕ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಮಂಗಳೂರು ಕ್ಯಾಮ್ಕೋ ಅಧ್ಯಕ್ಷ ಎಸ್. ಆರ್ ಸತೀಶ್ಚಂದ್ರ, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಸಹಕಾರ ಸಂಘಗಳ ಉಪ ನಿಭಂಧಕ ರಮೇಶ್ ಎಚ್. ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿರ್ದೇಶಕರು ಉಜಿರೆ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು, ನಿರ್ದೇಶಕ ಗ್ರೇಸಿಯನ್ ವೇಗಸ್, ಪ್ರಭಾರ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರಿಪ್ರಸಾದ್ ಐ. ಎಸ್. ಉಪಸ್ಥಿತರಿದ್ದರು.










