Home ಅಪರಾಧ ಲೋಕ ಬಳಂಜ ಶಾಲೆ: ಎಲ್ ಕೆಜಿ ಕೊಠಡಿ ಉದ್ಘಾಟನೆ, ಶಾಲಾ ವಾಹನ ಹಸ್ತಾಂತರ

ಬಳಂಜ ಶಾಲೆ: ಎಲ್ ಕೆಜಿ ಕೊಠಡಿ ಉದ್ಘಾಟನೆ, ಶಾಲಾ ವಾಹನ ಹಸ್ತಾಂತರ

1
0


ಬೆಳ್ತಂಗಡಿ :ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಳಂಜ,ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ಮತ್ತು ಬಳಂಜ ಶಿಕ್ಷಣ ಟ್ರಸ್ಟ್, ಹಳೆ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಅರ್ಪಿಸುವ ಶಾಲಾ ವಾಹನ ಹಸ್ತಾಂತರ ಮತ್ತು ಎಲ್ .ಕೆಜಿ ಕೊಠಡಿಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಸೋಮವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಬಳಂಜದ ಶಿಕ್ಷಣ ಟ್ರಸ್ಟ್ ತಮ್ಮ ಕಲ್ಪನೆಗೆ ಪೂರಕವಾಗಿ ಕೆಲಸ ಮಾಡಿದ ಪ್ರತಿಫಲವೇ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಟ್ರಸ್ಟ್ ಶ್ರಮ ಶ್ಲಾಘನೀಯ. ಬಸ್ ದಾನ ನೀಡಿದ ಅಶ್ವತ್ವ ಹೆಗ್ಡೆ ಬೇರೆ ಊರಿನಲ್ಲಿ ಇದ್ದರೂ ಊರಿನ ಬಗ್ಗೆ ಸದಾ ಚಿಂತನೆಯಲ್ಲಿ ಇರುವವರು ಅವರು ಮಕ್ಕಳಿಗೆ ಮಾದರಿಯಾಗಬೇಕು. ಎಲ್ಲವನ್ನು ಸರಕಾರ ಮಾಡಲು ಆಗುವುದಿಲ್ಲ. ಊರಿನವರ ಸಹಕಾರವೂ ಬೇಕಾಗುತ್ತದೆ ಎಂದರು.
ಎಂಎಲ್ ಸಿ ಕೆ.ಪ್ರತಾಪಸಿಂಹ ನಾಯಕ್, ಬಳಂಜ ಪ್ರೌಢಶಾಲಾ ವಿಭಾಗದ ಕಾರ್ಯಾಧ್ಯಕ್ಷ ಕೆ.ವಸಂತ ಸಾಲಿಯಾನ್,ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ,ಹಿರಿಯರಾದ ಅರುಣ ಹೆಗ್ಡೆ ಬಳಂಜ,ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿಕೆ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ,ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಲೋಚನ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಂಗಸ್ವಾಮಿ ಸ್ವಾಗತಿಸಿದರು.ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿದರು.

LEAVE A REPLY

Please enter your comment!
Please enter your name here