Home ರಾಷ್ಟ್ರ/ರಾಜ್ಯ ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆ 11 ದಿನಗಳಲ್ಲಿ ನಾಲ್ಕನೆ ಬಾರಿ ಏರಿಕೆ

ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆ 11 ದಿನಗಳಲ್ಲಿ ನಾಲ್ಕನೆ ಬಾರಿ ಏರಿಕೆ

1
0

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಿಸಲಾಗಿದೆ. ಸೋಮವಾರ ಪೆಟ್ರೋಲ್‌ ದರವನ್ನು ಲೀಟರ್‌ಗೆ 2.61 ರೂ. ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಿಸಲಾಗಿದೆ.

ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.12 ರೂ.ಗೆ ಹಾಗೂ ಡೀಸೆಲ್ ದರ 95.20 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದು ಲೀಟ‌ರ್ ಪೆಟ್ರೋಲ್ ದರ 110 ರೂ. ಗಡಿ ದಾಟಿದೆ. ಮಂಗಳೂರಿನಲ್ಲಿ 110.43 ರೂ. ದರವಿದೆ.
ಕಳೆದ 11 ದಿನದಲ್ಲಿ ಪೆಟ್ರೋಲ್ ಗೆ 7.96 ರೂ. ದರ ಹೆಚ್ಚಳವಾಗಿದೆ.

ಇಂಧನ ದರ ಏರಿಕೆಯಿಂದ ಜನಸಾಮಾನ್ಯರ ಮೇಲಿನ ಹಣದುಬ್ಬರದ ಒತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಿಶೇಷವಾಗಿ ಡೀಸೆಲ್ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಳವಾಗಲಿದ್ದು, ಅದರ ಪರಿಣಾಮ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಸಾಧ್ಯತೆ ಇದೆ.

ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 5%ಕ್ಕಿಂತ ಹೆಚ್ಚು ಇಳಿದು 100 ಡಾಲರ್‌ಗಿಂತ ಕಡಿಮೆಯಾದ ದಿನವೇ ದೇಶದಲ್ಲಿ ಇಂಧನ ದರ ಮತ್ತೆ ಹೆಚ್ಚಳವಾಗಿರುವುದು ಗಮನಾರ್ಹವಾಗಿದೆ.

ಮೇ 23ರಂದು ಕೂಡ ಇಂಧನ ದರ ಏರಿಕೆ ಮಾಡಲಾಗಿತ್ತು. ಆಗ ಪೆಟ್ರೋಲ್ ದರ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಹೆಚ್ಚಿಸಲಾಗಿತ್ತು.

LEAVE A REPLY

Please enter your comment!
Please enter your name here