ಬೆಳ್ತಂಗಡಿ: ಸವಣಾಲು ಗ್ರಾಮದ ಪೇಲ ಎಂಬಲ್ಲಿ ಹುಲಿ ಗಣತಿಯ ಸಲುವಾಗಿ ಹಾಕಲಾಗಿದ್ದ ಎರಡು ಕ್ಯಾಮೆರಾಗಳನ್ನು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಕೆ. ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸವಣಾಲು ಗ್ರಾಮದ ಪೇಲ ಎಂಬಲ್ಲಿ ಮೇ ಒಂದರಂದು ಹುಲಿ ಗಣತಿಗಾಗಿ ಕ್ಯಾಮೆರಗಳನ್ನು ಅಳವಡಿಸಲಾಗಿತ್ತು.ಮೇ 13 ರಂದು ಪರಿಶೀಲಿಸಿದಾಗ ಎರಡು ಕ್ಯಾಮರಾಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕಂಡು ಬಂದಿದೆ ಕಳವಾದ ಕ್ಯಾಮರಾಗಳ ಅಂದಾಜು ಮೌಲ್ಯ ರೂ 48000 ಆಗಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ302(2) ನಂತೆ ಪ್ರಕರಣ ದಾಖಲಿಸಲಾಗಿದೆ.



