ಬೆಳ್ತಂಗಡಿ : ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಲಾಯಿಲ ಗ್ರಾಮದ ಸವಣಾಲು – ಕರ್ನೊಡಿ ರಸ್ತೆಯ ನಿಡ್ಯಾರ ಗುಡ್ಡದಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಮೇ 5 ರಂದು ಸಂಜೆ ಪತ್ತೆಯಾಗಿದೆ.ಸ್ಥಳೀಯ ನಿವಾಸಿಗೆ ದುರ್ವಾಸನೆ ಬಂದಿದ್ದರಿಂದ ಗುಡ್ಡಕ್ಕೆ ಹೋಗಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಮರವೊಂದರಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮತ್ತು ಸೋಕೋ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತನ ಅಂದಾಜು ಸುಮಾರು 45 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಯಾಗಿರಬಹುದಾಗಿದ್ದು. ಶವ ಸಂಪೂರ್ಣ ಕೊಳೆತಿದ್ದು ಸುಮಾರು ಒಂದು ವಾರಗಳ ಹಿಂದೆ ಘಟನೆ ನಡೆದಿರಬಹುದು ಎಂದು ಸಂಶಯಿಸಲಾಗಿದೆ.




