ಬೆಳ್ತಂಗಡಿ; ಅಂತರಾಷ್ಟ್ರೀಯ ಹಿಂದೂ ಮಹಾಸಭಾ ವತಿಯಿಂದ ಭಾರತ ರತ್ನ. ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ 135 ನೇ ಜಯಂತಿಯ ಅಂಗವಾಗಿ ಅಂತಾರಾಷ್ಟ್ರೀಯ ಹಿಂದೂ ಮಹಾಸಭಾ ಧಾರವಾಡ ಇವರು ನೀಡುವ ಅಂಬೇಡ್ಕರ್ ಸೇವಾ ರತ್ನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಶೇಷ ಸಾಧನೆ ಗೈದ ಸಾಧಕಾರಿಗೆ ಪ್ರಧಾನ ಸಮಾರಂಭ ಏಪ್ರಿಲ್ 15 ರಂದು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ಕಡು ಬಡವರನ್ನು ಆರಿಸಿ ಅವರಿಗೆ ಕೈಲಾದ ಸೇವೆಯ ಮೂಲಕ ಸರಕಾರಿ ಶಾಲೆಗಳ ಸ್ವಚ್ಛಾಲಯದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ ಕೇಸರಿ ಸೇವಾ ಟ್ರಸ್ಟ್ ರಿ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ಆಯ್ಕೆಯಾಗಿದ್ದಾರೆ.









