Home ಅಪರಾಧ ಲೋಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಬೆಳ್ತಂಗಡಿಯ ಯುವತಿಯ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಬೆಳ್ತಂಗಡಿಯ ಯುವತಿಯ ಬಂಧನ

0
4

ಬೆಳ್ತಂಗಡಿ: ಮಂಗಳೂರು ನಗರದ ಬಜೆ ಠಾಣಾ ವ್ಯಾಪ್ತಿಯಲ್ಲಿ ದಿ 2025 ನೇ ಸಾಲಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಕಂಕನಾಡಿ ನಗರ 353 (1), 353(2), 61 (2), 55 ಬಿ.ಎನ್.ಎಸ್.2023 ರಂತೆ ದಾಖಲಾದ ಪ್ರಕರಣದಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ “Terrorism has religion and so called Terrorists too. Its Islam” ಮತ್ತು ಇದೇ ರೀತಿಯ ಕೆಲವು ಪೋಸ್ಟ್ ಗಳನ್ನು ಹಾಕಲಾಗಿತ್ತು. ಬೆಳ್ತಂಗಡಿ ತಾಲೂಕಿನ ಅಳದಂಗಡಿ  ಶಿರ್ಲಾಲು ನಿವಾಸಿಯಾಯಾಗಿರುವ ಯುವತಿಯೊಬ್ಬಳು ಹಂಚಿಕೊಂಡ ಬಗ್ಗೆ ತನಿಖೆಯಲ್ಲಿ ಕಂಡು ಬಂದಿದ್ದು, ಮಾ 19 ರಂದು ಆಕೆಯನ್ನು ಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೊಬೈಲ್ ಮತ್ತು ಪೋಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here